ಬೆಳಗಾವಿ: ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಶಿಗ್ಗಾಂವಿಯಿಂದ ಸ್ಪರ್ಧೆ ವಿಚಾರಕ್ಕೆ ಮಾಜಿ ಸಚಿವ ವಿನಯ್ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಗ್ಗಾಂವಿಯಿಂದ ಸ್ಪರ್ಧೆ ವಿಚಾರ ನನ್ನದಲ್ಲ. ಹೈಕಮಾಂಡ್ ನಾಯಕರು ಸ್ಪರ್ಧಿಸುವಂತೆ ಹೇಳುತ್ತಿದ್ದಾರೆ. ಹಲವು ಬಾರಿ ನಮ್ಮ ನಾಯಕರು ಈ ವಿಚಾರ ಹೇಳಿದ್ದಾರೆ. ನನಗೆ ಧಾರವಾಡ ಪ್ರವೇಶಕ್ಕೆ ಕುತಂತ್ರದಿಂದ ಅವಕಾಶ ನೀಡುತ್ತಿಲ್ಲ ಎಂದರು.
ನಾನು ಕಳೆದ 20 ವರ್ಷದಿಂದ ರಾಜಕಾರಣದಲ್ಲಿ ಇದ್ದೇನೆ. ನಾಲ್ಕೈದು ಕ್ಷೇತ್ರದಲ್ಲಿ ನಿಂತರೂ ನಾನು ಗೆಲ್ಲುತ್ತೇನೆ. ಪಕ್ಷ ನನಗೆ ನಿಲ್ಲಬೇಡ ಅಂದ್ರೆ ನಾನು ತ್ಯಾಗ ಮಾಡುತ್ತೇನೆ ಎಂದು ಹೇಳಿದರು.
ಇನ್ನು ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ವಿನಯ್ ಕುಲಕರ್ಣಿ, ಸಿದ್ದರಾಮಯ್ಯ ಲೆವೆಲ್ಗೆ ರಾಜ್ಯದಲ್ಲಿ ಯಾರೂ ಸರಿಸಾಟಿ ಇಲ್ಲ. ಸಿದ್ದರಾಮಯ್ಯರನ್ನು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತ ಮಾಡಬೇಡಿ. ನಾವು ಕೂಡ ಸಿದ್ದರಾಮಯ್ಯರನ್ನು ಕ್ಷೇತ್ರಕ್ಕೆ ಆಹ್ವಾನಿಸಿದ್ದೇವೆ. ಯಾವ ಸಿಎಂ ನೀಡದ ಕೊಡುಗೆಯನ್ನು ಸಿದ್ದರಾಮಯ್ಯ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಕೊಟ್ಟ ಕೊಡುಗೆ ಯಾರಿಂದಲೂ ಕೊಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯರನ್ನು ಹಾಡಿ ಹೊಗಳಿದರು.










