ಸಂಜಯ್ ರಾವತ್ ನ್ಯಾಯಾಂಗ ಬಂಧನ ಸೆ.5ರವರೆಗೆ ವಿಸ್ತರಿಸಿದ ಕೋರ್ಟ್.

39
firstsuddi

ಮುಂಬೈ: ಪತ್ರಾ ಚಾಲ್ ಭೂಹಗರಣ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ನ್ಯಾಯಾಂಗ ಬಂಧನವನ್ನು ಇಲ್ಲಿನ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 5 ರವರೆಗೆ ವಿಸ್ತರಿಸಿದೆ.

ಮುಂಬೈನ ಪತ್ರಾ ಚಾಲ್ ಮರು ಅಭಿವೃದ್ಧಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಕಸ್ಟಡಿಯಲ್ಲಿದ್ದ ರಾವುತ್ ಅವರನ್ನು ಆಗಸ್ಟ್ 8 ರಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ (ಆಗಸ್ಟ್ 22ರವರೆಗೆ) ಕಳುಹಿಸಲಾಗಿತ್ತು. ಇಂದು ಪ್ರಕರಣದ ವಿಚಾರಣೆ ನಡೆದಿದ್ದು, ರಾವುತ್ ಅವರ ನ್ಯಾಯಾಂಗ ಬಂಧನವನ್ನು ಸೆ.5ರವರೆಗೆ ವಿಸ್ತರಿಸಿ ವಿಶೇಷ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ ಆದೇಶಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿತು.

ಬಂಧನಕ್ಕಿಂತ ಮುನ್ನ ರಾವತ್ ಅವರನ್ನು ಇಡಿ ವಿಚಾರಣೆಗೊಳಪಡಿಸಿತ್ತು. ಸಂಸತ್ ನಲ್ಲಿ ಮುಂಗಾರು ಅಧಿವೇಶನವಾಗುತ್ತಿದ್ದಾಗ ಇಡಿ ಸಮನ್ಸ್ ಕಳುಹಿಸಿತ್ತು. ಎರಡು ಸಮನ್ಸ್ ಗಳಿಗೆ ಹಾಜರಾಗದ ಕಾರಣ ಆಗಸ್ಟ್ 1 ರಂದು ರಾವತ್ ನ್ನು ಇಡಿ ಬಂಧಿಸಿತ್ತು. ಸಂಜಯ್ ರಾವತ್ ಬಂಧನ ನಂತರ ಇದೇ ಪ್ರಕರಣ ಬಗ್ಗೆ ಅವರ ಪತ್ನಿಯನ್ನೂ ವಿಚಾರಣೆಗೊಳಪಡಿಸಲಾಗಿತ್ತು.