ಸಕಲೇಶಪುರ : ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ…

119
First Suddi

ಸಕಲೇಶಪುರ (ಹಾಸನ) : ಕೂಲಿ ಕಾರ್ಮಿಕನ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಹಿನ್ನೆಲೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲ್ಲೂಕಿನಲ್ಲಿ ನಡೆದಿದೆ.
ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಸಮೀಪದ ಅಸಿಡೇ ಗ್ರಾಮದ ಮಂಜುನಾಥ್ ಎಂಬುವರ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವಸಂತ್ ಮೇಲೆ ಬುಧವಾರ ಸಂಜೆ ಹಿಂಬದಿಯಿಂದ ಬಂದ ಕಾಡಾನೆಯಂದು ಏಕಾಏಕಿ ಕಾರ್ಮಿಕನನ್ನು ಎತ್ತಿ ಬಿಸಾಡಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದಿದ್ದಾನೆ. ದಾಳಿ ನಡೆಸಿದ ಆನೆಯ ಆರ್ಭಟವನ್ನು ಕೇಳಿಸಿಕೊಂಡ ಸ್ಥಳಿಯರು ತಕ್ಷಣ ತೋಟದ ಸಮೀಪ ಹೋದಾಗ ವಸಂತ್ ರಕ್ತಸಿಕ್ತವಾಗಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ವಸಂತ್, ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸಕಲೇಶಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.