ಬೆಂಗಳೂರು : ಕೋವಿಡ್ ಸೋಂಕಿನ ಚೈನ್ ಲಿಂಕ್ ಮುರಿಯಲು ಕೇವಲ ವೀಕೆಂಡ್ ಅಲ್ಲ, ವಾರ ಪೂರ್ತಿ ಲಾಕ್ ಡೌನ್ ಮಾಡಲಾಗುತ್ತೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಇಂದು ಸಿಎಂ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಮೇ 1ರಿಂದ 18 ವರ್ಷ ತುಂಬಿದ ಎಲ್ಲರಿಗೂ ಲಸಿಕೆ ನೀಡಿಕೆ ಸಂಬಂಧ ಮಹತ್ವದ ನಿರ್ಧಾರ ಹೊರಬೀಳುವ ಸಂಭವವಿದೆ. ಒಟ್ಟಾರೆ ಲಾಕ್ ಡೌನ್ ಗೊಂದಲಕ್ಕೆ ಇಂದು ತೆರೆ ಬೀಳಲಿದೆ.
ವಾರಾಂತ್ಯದ ಕರ್ಫ್ಯೂ ಜೊತೆ ಇಡೀ ವಾರ ಲಾಕ್ ಡೌನ್ ಬೇಕು ಎಂದರೇ, ಅದರ ಮೇಲೆ ಚರ್ಚೆ ನಡೆಯಬಹುದು ಎನ್ನಲಾಗಿದೆ. ಲಾಕ್ ಡೌನ್ ಗೆ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕರೆ ವೀಕೆಂಡ್ ಕರ್ಫ್ಯೂ ಮಾದರಿ ರೂಲ್ಸ್ ಮುಂದುವರಿಕೆ ಆಗಲಿದ್ದು, ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ವೀಕೆಂಡ್ನಂತೆಯೇ ಬೆಳಗ್ಗೆ 6ರಿಂದ 10ರವರೆಗೆ ಸಮಯ ನಿಗದಿಯಾಗುವ ಸಾಧ್ಯತೆಗಳಿದ್ದು, ಇಂದು ಲಾಕ್ ಡೌನ್ ಬಗ್ಗೆ ಸರ್ಕಾರದ ನಿಲುವು ಮತ್ತು ಕರ್ಫ್ಯೂ ವಿಚಾರದಲ್ಲಿ ಸ್ಪಷ್ಟತೆ ಹೊರಬೀಳಲಿದೆ ಎನ್ನಲಾಗಿದೆ.










