ಸಚಿವ ಸ್ಥಾನಕ್ಕೆ ಧರಂ ಸಿಂಗ್ ಸೈನಿ ರಾಜೀನಾಮೆ – ಯುಪಿಯಲ್ಲಿ 9 ನಾಯಕರು ಬಿಜೆಪಿಗೆ ಗುಡ್‍ಬೈ!

84
firstsuddi

ಲಕ್ನೋ : ಉತ್ತರಪ್ರದೇಶದಲ್ಲಿ ಚುನಾವಣೆ ಘೋಷಣೆಯಾದ ಬಳಿಕ ಆಡಳಿತಾರೂಢ ಬಿಜೆಪಿಗೆ ಭಾರೀ ಹೊಡೆತ ಬೀಳುತ್ತಿದೆ. ಕಳೆದ ಮೂರು ದಿನದಲ್ಲಿ ಒಂಬತ್ತು ಮಂದಿ ಶಾಸಕರು ಹಾಗೂ ಸಚಿವರು ಬಿಜೆಪಿ ತೊರೆದಿದ್ದಾರೆ.

ಇಂದು ಬಿಜೆಪಿಯ ಮತ್ತೋರ್ವ ಸಚಿವ ಡಾ. ಧರಂ ಸಿಂಗ್ ಸೈನಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಹೊರ ಬಂದಿದ್ದಾರೆ.

ಉತ್ತರ ಪ್ರದೇಶದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ 2 ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಧರಂ ಸಿಂಗ್ ಸೈನಿ, ಮುಖೇಶ್ ವರ್ಮಾ, ವಿನಯ್ ಶಾಕ್ಯಾ, ರೋಷನ್ ಲಾಲ್ ವರ್ಮಾ, ಬ್ರಜೇಶ್ ಪ್ರಜಾಪತಿ, ಭಗವತಿ ಸಾಗರ್, ದಾರಾ ಸಿಂಗ್ ಚೌಹಾಣ್, ಅವತಾರ್ ಸಿಂಗ್ ಭದಾನ ಅವರು ರಾಜೀನಾಮೆ ನೀಡಿದ್ದಾರೆ.

ಇನ್ನೂ ಫಿರೋಜಾಬಾದ್ ಜಿಲ್ಲೆಯ ಶಿಕೋಹಬ್ದ್ ನ ಶಾಸಕ ಮುಖೇಶ್ ವರ್ಮಾ ಈಗ ರಾಜೀನಾಮೆ ನೀಡಿದ ಏಳನೇ ಶಾಸಕ ಆಗಿದ್ದಾರೆ. ರಾಜೀನಾಮೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಸ್ವಾಮಿ ಪ್ರಸಾದ್ ಮೌರ್ಯ ನಮ್ಮ ನಾಯಕ, ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಬೆಂಬಲಿಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ನಾಯಕರು ನಮ್ಮೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.