ಚಾಮುಂಡೇಶ್ವರಿ ದೇವಸ್ಥಾನವನ್ನು ಕಾಂಗ್ರೆಸ್ಸಿನವರು ಇದು ಹಿಂದೂ ದೇವಸ್ಥಾನ ಅಲ್ಲ ಅಂತ ಹೇಳುತ್ತಾರೆ ಹಾಗಾದರೆ ಈ ದೇವಸ್ಥಾನ ಯಾರದು? ಆರ್. ಅಶೋಕ್ ಪ್ರಶ್ನೆ…

43

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಪವಿತ್ರವಾದ ಹಬ್ಬವನ್ನು ಅಪವಿತ್ರ ಮಾಡಬೇಡಿ . ತಾಯಿ ಚಾಮುಂಡೇಶ್ವರಿ ಅವರಿಗೆ ಮಾರ್ಗದರ್ಶನ ಮಾಡಲಿ.ಶ್ರದ್ಧಾ ಕೇಂದ್ರಗಳು ಹಾಗೆ ಉಳಿಯಬೇಕು ಎಂಬ ಉದ್ದೇಶದಿಂದ ಬಂದಿದ್ದೇನೆ. ಚಾಮುಂಡೇಶ್ವರಿ ದೇವಸ್ಥಾನವನ್ನು ಕಾಂಗ್ರೆಸ್ಸಿನವರು ಇದು ಹಿಂದೂ ದೇವಸ್ಥಾನ ಅಲ್ಲ ಅಂತ ಹೇಳುತ್ತಾರೆ ಹಾಗದರೆ ಈ ದೇವಸ್ಥಾನ ಯಾರದು? ಮುಂದೆ ಸರ್ಕಾರ ಏನಾದರೂ ಇದು ಹಿಂದೂ ದೇವಸ್ಥಾನ ಅಲ್ಲ ಅಂತ ಪದೇಪದೇ ಹೇಳ್ತಾ ಇದ್ರೆ ಯಾವ ರೀತಿ ಧರ್ಮಸ್ಥಳ ಯಾತ್ರೆಯನ್ನು ಮಾಡುತಿದ್ದೇವೋ, ಅದೇ ರೀತಿ ಚಾಮುಂಡೇಶ್ವರಿ ದೇವಸ್ಥಾನ ಚಲೋ ಅನ್ನೋ ಕಾರ್ಯಕ್ರಮವನ್ನು ಮಾಡಬೇಕಾಗುತ್ತದೆ. ಹಿಂದುಗಳನ್ನು ಟಾರ್ಗೆಟ್ ಮಾಡುತ್ತಿದ್ದೀರಾ ಇದು ಮುಂದುವರೆದರೆ, ನೀವೇನಾದ್ರೂ ನಿಮ್ಮ ಟೂಲ್ ಕಿಟ್ ಸಂಸ್ಕೃತಿಯನ್ನು ಮುಂದುವರಿಸಿದರೆ ಎಚ್ಚರಿಕೆ ಎಂದು ಆರ್ ಅಶೋಕ್ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.