ಮೂಡಿಗೆರೆ :ಪ.ಪಂ ನಿಂದ ಪರವಾನಿಗೆ ಶುಲ್ಕದ ಬರೆ. ವರ್ತಕರಿಂದ ವಿರೋಧ

22

ಮೂಡಿಗೆರೆ: ವರ್ತಕರ ಪರವಾನಿಗೆ ಶುಲ್ಕ ಹೆಚ್ಚಳ ವಿರೋದಿಸಿ ಪಟ್ಟಣ ಪಂಚಾಯಿತಿಗೆ ಜಮಾಯಿಸಿದ ವರ್ತಕರ ಸಂಘ. ಶುಲ್ಕವನ್ನು ಕಡಿತಗೊಳಿಸಲು ಆಗ್ರಹಿಸಿ ಆಡಳಿತ ಅಧಿಕಾರಿ ತಹಶಿಲ್ದಾರ್ ಅಶ್ವಿನಿ ಅವರಿಗೆ ಮನವಿ ಸಲ್ಲಿಸಲಾಯಿತು
ವರ್ತಕರ ಲೈಸೆನ್ಸ್ ಶುಲ್ಕವನ್ನು 10ಪಟ್ಟು ದಿಡೀರ್ ಹೆಚ್ಚಿಸಿರುವುದನ್ನು ವಿರೋಧಿಸಿ ಪಟ್ಟಣ ಪಂಚಾಯಿತಿ ಬಜೆಟ್ ಪೂರ್ವಭಾವಿ ಸಭೆಗೆ ತೆರಳಿ ಕಡಿತಗೊಳ್ಳಲು ಆಗ್ರಹಿಸಿ ವರ್ತಕರ ಸಂಘದಿಂದ ಮನವಿ ನೀಡಲಾಯಿತು ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಆದರ್ಶ್ ಒಂದು ಸಾವಿರ ಇದ್ದ ಶುಲ್ಕವನ್ನು 10,000 ಗಳಿಗೆ 2000 ಇದ್ದದ್ದು ಇಪ್ಪತ್ತು ಸಾವಿರಗಳಿಗೆ ಎರಿಸಲಾಗಿದ್ದು ಈಗಾಗಲೇ ಪಟ್ಟಣದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಲಗ್ಗೆ ಮತ್ತು ಮೂಲಭೂತ ಸೌಕರ್ಯದ ಕೊರತೆ ಮುಂತಾದ ಕಾರಣಗಳಿಂದ ತಿಂಗಳಿಗೆ 10,000 ವ್ಯಾಪಾರ ಮಾಡುವುದು ಕಷ್ಟವಾಗಿದೆ. ಅನೇಕ ಅಂಗಡಿಗಳು ಬಾಗಿಲು ಹಾಕುತ್ತಿವೆ. ಇಂಥದರಲ್ಲಿ ಅಂಗಡಿ ಪರವಾಗಿ ಶುಲ್ಕವನ್ನು ಹತ್ತು ಪಟ್ಟು ಏರಿಸಿರುವುದು ವರ್ತಕರಿಗೆ ಬರಿಸುವುದು ಕಷ್ಟವಾಗಿದ್ದು ಇದನ್ನು ಗ್ರಾಹಕರ ಮೇಲೆ ಹೇರಬೇಕಾಗುತ್ತದೆ ಈಗಾಗಲೇ ಗ್ರಾಹಕರ ಕೊರತೆಯಿಂದ ನಲುಗಿರುವ ವ್ಯಾಪಾರ ಮತ್ತಷ್ಟು ಪಾತಾಳಕ್ಕೆ ಇಳಿಯುತ್ತದೆ‌ ಈ ಕಾರಣದಿಂದ ಶುಲ್ಕವನ್ನು ಕೂಡಲೇ ಮರ ಪರಿಶೀಲಿಸಿ ಹಳೆಯ ಶುಲ್ಕವನ್ನೇ ಮುಂದುವರಿಸಬೇಕು. ಇಲ್ಲದಿದ್ದಲ್ಲಿ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ. ಪಟ್ಟಣ ಪಂಚಾಯಿತಿ ಮುಂದೆ ಸತ್ಯಗ್ರಹ ಕೂರಬೇಕಾಗುತ್ತದೆ. ಎಂದರು.

ನಗರದ ಬಹುತೇಕ ವರ್ತಕರು 11ರಿಂದ 12 ಗಂಟೆ ತನಕ ಸಾಂಕೇತಿಕವಾಗಿ ಬಂದ್ ಮಾಡಿ ಪಟ್ಟಣ ಪಂಚಾಯಿತಿಗೆ ಆಗಮಿಸಿ ಮನವಿ ಸಲ್ಲಿಸಲು ಬಾಗವಹಿಸಿದರು.