ಮೂಡಿಗೆರೆ : ಮಲೆನಾಡಿನಲ್ಲಿ ಜಾನಪದ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿದೆ. ಇದಕ್ಕೆ ಯಾರು ಗುರುವಿಲ್ಲ. ಬಾಯಿಂದ ಬಾಯಿಗೆ ಪದ ಪದ ಸೇರಿ ಪ್ರಕೃತಿಯ ನಡುವೆ ಮೂಡಿ ಬಂದ ಸ್ವರವೇ ಜಾನಪದ. ಜನಪದರು . ಯಾವುದೇ ವಿಶ್ವ ವಿದ್ಯಾನಿಲಯಗಳಲ್ಲಿ ಕಲಿತವರಲ್ಲ. ಅವರು ಅನಕ್ಷರಸ್ಥರು. ಆದರೆ, ಅತ್ಯಂತ ವಿವೇಕಿಗಳಾಗಿದ್ದರು. ಜಾನಪದವನ್ನು ನಾವು ಆಧುನಿಕ ಜ್ಞಾನಕ್ಕೆ ವಿರುದ್ಧವಾದುದು ಎಂದುಕೊಂಡಿದ್ದೇವೆ. ಆದರೆ, ನಿಜವಾಗಿಯೂ ನಮ್ಮ ಇಂದಿನ ಊಟ, ಉಪಹಾರ, ವೈದ್ಯಕೀಯ ಎಲ್ಲದರಲ್ಲೂ ಜಾನಪದ ಅಡಕವಾಗಿದೆ ಎಂದು ರಾಘವೇಂದ್ರ ಕೆಸವಳಲು ತಿಳಿಸಿದರು.
ತಾಲ್ಲೂಕಿನ ದಾರದಹಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾನಪದ ಮತ್ತು ಆರೋಗ್ಯ ಅರಿವು ಹಾಗೂ ಜಾನಪದ ಕಲಾಸಿರಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ
ಜಾನಪದ ಕಲ್ಪನೆಯಿಂದ ಹುಟ್ಟಿದ್ದಲ್ಲ; ಅದು ಜನಪದರ ಅನುಭವದ ಮೂಸೆಯಿಂದ ಹುಟ್ಟಿದ್ದು. ಇದೇ ಕಾರಣಕ್ಕೆ ಜಾನಪದ ಜನಸಮುದಾಯದ ಭಗವದ್ಗೀತೆ ಮಲೆನಾಡಿನಲ್ಲಿ ಜಾನಪದ ಕಲೆಗಳು ಇತಿಹಾಸ ಸೇರದೆ ಪುನರುಜ್ಜೀವನಗೊಂಡು ಎಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಬೇಕು ಎಂದು ಆಶಿಸಿದರು.
ತಾಲ್ಲೂಕು ವೈಧ್ಯಾಧಿಕಾರಿ ಡಾ.ಪ್ರಿಯಾಂಕ ಪ್ರಭಾಕರ್ ಮಾತನಾಡಿ ವಿಧ್ಯಾರ್ಥಿಗಳು ಆರೋಗ್ಯದತ್ತ ಹೆಚ್ಚು ಗಮನಹರಿಸುವುದರೊಂದಿಗೆ ಮೊಬೈಲ್ ಬಳಕೆ ಮಿತವಾಗಿರಲಿ, ಇಂದಿನ ದಿನಗಳಲ್ಲಿ ದೌರ್ಜನ್ಯ ಮಿತಿಮೀರುತ್ತಿದ್ದು ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಮತ್ತು ಪೋಷಕರ ಹಾಗೂ ಶಿಕ್ಷಕರ ಗಮನಕ್ಕೆ ತರುವುದರೊಂದಿಗೆ ಆಟೋಟದ ಜೊತೆಗೆ ಜಾನಪದವನ್ನು ಅಳವಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ ಮೂಡಿಗೆರೆ ಘಟಕದ ಅಧ್ಯಕ್ಷ ರವಿಕುನ್ನಹಳ್ಳಿ ಮಾತನಾಡಿ, ಜಾನಪದ ಕಲೆ ಮತ್ತು ಸಾಹಿತ್ಯದ ಹಾಗೂ ಆರೋಗ್ಯ ದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ವೈಧ್ಯಾಧಿಕಾರಿ ಡಾ.ಪ್ರಿಯಾಂಕ ಪ್ರಭಾಕರ್ ಅವರನ್ನು ಸನ್ಮಾನಿಸಲಾಯಿತು.
ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಕೆ.ಎಸ್.ರಮೇಶ್ ಉದ್ಘಾಟಿಸಿದರು. ಕೃಷಿ ಪತ್ತಿನ ಅಧ್ಯಕ್ಷರಾದ ಸಿದ್ದೇಶ್, *ಉಪಾಧ್ಯಕ್ಷರಾದ ಧಾರ್ಮಿಕ ದಿನೇಶ್* ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶಮಿಉಲ್ಲಾ ಶರೀಫ್, ಪಂಚಾಯತಿ ಸದಸ್ಯರುಗಳಾದ ವಿಕ್ರಂ,ಸಾಧನ ಮನೀಶ್, ದಾರದಹಳ್ಳಿ ಶಾಲೆಯಮುಖ್ಯ ಶಿಕ್ಷಕಿ ರೂಪ, ತಾಲ್ಲೂಕು ಜಾನಪದ ಪರಿಷತ್ತಿನ ಸುಬ್ರಹ್ಮಣ್ಯ ,ದೀಪಿಕಾ, ಎಂ.ಎಸ್.ನಾಗರಾಜ್, ಗ್ರಾಮಸ್ಥರಾದ ಮನೋಜ್ ಕುಮಾರ್, ರಂಜಿತ್,ರೇಖಾಕೇಶವ್, ಸೇರಿದಂತೆ ಅನೇಕರು ಭಾಗವಹಿಸಿದ್ದರು. ರವೀಂದ್ರ ಬಕ್ಕಿ ಅವರ ಕಂಠ ಸ್ವರದಲ್ಲಿ ಮೂಡಿಬಂದ ಜಾನಪದ ಗೀತೆಗಳು ಮಂತ್ರ ಮುಗ್ದವಾಗಿರಿಸಿತು. ಜಾನಪದ ಕಲಾವಿದ ವೆಂಕಟೇಶ್ ಹೇಮಾವತಿನಗರ ಕಾರ್ಯಕ್ರಮವನು ಆಯೋಜಿಸಿದ್ದರು.

ಇದೇ ಸಂದರ್ಭದಲ್ಲಿ ಮಹೇಶ್, ನಾಗೇಶ್ ಕೆ. ರಘು ಹೇಮಾವತಿ ನಗರ, ಪ್ರೇಮಕುಮಾರ್ ಅವರಿಗೆ ಜಾನಪದ ಕಲಾ ಸಿರಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.










