ಧರ್ಮಾಂಧರು ಮಾತ್ರ ಬಾನು ಮುಷ್ತಾಕ್‌ ಹೆಸರನ್ನು ವಿರೋಧಿಸುತ್ತಾರೆ: ಸಿಎಂ ಸಿದ್ದರಾಮಯ್ಯ

48

ಮೈಸೂರು: ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರು ಬುಕರ್‌ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್‌ ಅವರ ಹೆಸರನ್ನು ಪೋಷಿಸಿದ್ದಾರೆ . ಇದನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಧರ್ಮಾಂಧರು ಮಾತ್ರ ಬಾನು ಮುಷ್ತಾಕ್‌ ಹೆಸರನ್ನು ವಿರೋಧಿಸುತ್ತಾರೆ. ಅವರು ದನ ತಿನ್ನೋದನ್ನ ಬಿಜೆಪಿಯವರು ನೋಡಿದ್ದಾರಾ? ನಿಸಾರ್ ಅಹಮದ್ ದಸರಾ ಉದ್ಘಾಟನೆಯನ್ನು ಮಾಡಿದ್ದಾರೆ, ಟಿಪ್ಪು, ಹೈದರಾಲಿ ದಸರಾ ನಡೆಸಿದ್ದಾರೆ. ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು ದಸರಾ ಆಚರಿಸಿದ್ದಾರೆ. ಧರ್ಮತೀತವಾದ, ಜಾತ್ಯತೀತವಾದ ಹಬ್ಬ ಇದು. ಧರ್ಮಾಂಧರು ಯಾರಿದ್ದಾರೋ ಅವರು ಮಾತ್ರ ಈ ರೀತಿ ಮಾತಾಡೋದು. ಇತಿಹಾಸ ಅವರಿಗೆ ಗೊತ್ತಿರುವುದಿಲ್ಲ. ಇತಿಹಾಸ ತಿಳಿದುಕೊಳ್ಳುವುದು ಒಳ್ಳೆಯದು ಎಂದರು.