ಧರ್ಮಸ್ಥಳ ಕೇಸ್ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು

46

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ತನಿಖೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ .ಪರಮೇಶ್ವರ್ ಅವರು ತನಿಖೆ ನಡೆಯುತ್ತಿದೆ . ತನಿಖೆ ಮುಗಿಯುವವರೆಗೂ ನಾವು ಅವರನ್ನು ಕೇಳುವ ಹಾಗಿಲ್ಲ ಅವರು ಹೇಳುವ ಹಾಗಿಲ್ಲ ಎಂದರು.
ಸೌಜನ್ಯ ತಾಯಿ ಕೊಟ್ಟಿರುವ ದೂರು ತನಿಖೆ ಆಗುತ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಸಿದ ಅವರು ಅದನ್ನ ಎಸ್‌ ಐಟಿ ಅವರು ಡಿಸೈಡ್ ಮಾಡ್ತಾರೆ. ಇದಕ್ಕೂ ಅದಕ್ಕೂ ಲಿಂಕ್ ಇದೆಯಾ, ಇಲ್ವಾ ,ಹಾಗೂ ತನಿಖೆ ಮಾಡಬೇಕಾ, ಬೇಡ್ವಾ, ಅಂತ ಎಸ್‌ ಐಟಿ ನಿರ್ಧರಿಸಿ ತನಿಖೆ ಮಾಡುತ್ತದೆ. ನಾವು ಅದನ್ನ ಹೇಳುವುದಕ್ಕೆ ಸಾಧ್ಯವಿಲ್ಲ ಎಂದರು. ಎಸ್‍ಐಟಿ ಅಧಿಕಾರಿಗಳೇ ಚಿನ್ನಯ್ಯನನ್ನು ಮಹಜರು ನಡೆಸಲು ನಿರ್ಧರಿಸುತ್ತಾರೆ ಎಂದು ಪ್ರತಿಕ್ರಿಯಿಸಿದರು.