ಸಮಾಜದಲ್ಲಿ ಮಹಿಳೆಗೆ ರಕ್ಷಣೆ ಅಗತ್ಯ : ಮೋಟಮ್ಮ.

73
firstsuddi

ಕೊಟ್ಟಿಗೆಹಾರ : ಸಮಾಜದಲ್ಲಿ ಮಹಿಳೆಗೆ ಸರಿಯಾದ ರಕ್ಷಣೆ ಸಿಗುತ್ತಿಲ್ಲ. ಇದರಿಂದಾಗಿ ಕೆಲವೆಡೆ ದುಷ್ಕøತ್ಯಗಳು ನಡೆಯುತ್ತಿವೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.

ಬಣಕಲ್‍ನ ಚರ್ಚ್ ಹಾಲ್‍ನಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿ ಮಹಿಳೆ ವಿವಿಧ ರೀತಿಯ ಸ್ಥಾನಗಳನ್ನು ಅಲಂಕರಿಸುವ ಮೂಲಕ ತನಗೆ ನೀಡಿರುವ ಜವಾಬ್ದಾರಿಯನ್ನು ನಿರ್ವಹಣೆ ಮಾಡುತ್ತಿದ್ದಾಳೆ.ಅದರ ಜತೆಯಲ್ಲಿ ಆಕೆಗೆ ಆತ್ಮ ವಿಶ್ವಾಸ ತುಂಬುವ ಕೆಲಸ ಸಮಾಜದಿಂದ ಆಗಬೇಕಿದೆ. ಮಹಿಳೆಯು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸಮಾಜದ ವಿವಿಧ ಸ್ಥರಗಳಲ್ಲಿ ಆಕೆಗೆ ಪ್ರೋತ್ಸಾಹ ನೀಡುವ ಕಾರ್ಯ ನಡೆಯಬೇಕು. ಮಹಿಳೆಯರಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳು ಸಿಗುತ್ತವೆ. ಅದರ ಸದುಪಯೋಗವನ್ನು ಮಹಿಳೆಯರು ಮಾಡಿಕೊಳ್ಳಬೇಕು ಎಂದರು.

ಬಣಕಲ್ ಬಾಲಿಕಾ ಮರಿಯ ಚರ್ಚ್‍ನ ಧರ್ಮಗುರು ಫಾ.ಆಲ್ಬರ್ಟ್ ಡಿಸಿಲ್ವ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ಪುರುಷರ ಸರಿಸಮಾನರಾಗಿ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರು ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸುವ ಕೆಲಸವಾಗಬೇಕು.ಕೆಲಸದ ನಡುವೆಯೂ ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಮಹಿಳೆಯು ಸಮರ್ಪಕವಾಗಿ ನಿರ್ವಹಿಸುತ್ತಾ ಬಂದಿದ್ದಾರೆ ಎಂದರು.

ಸಂಚಿ ಹೊನ್ನಮ್ಮ ಮಹಿಳಾ ಮಂಡಳಿ ಅಧ್ಯಕ್ಷೆ ಟಿ.ಕಮಲಾಕ್ಷಮ್ಮ ಮಾತನಾಡಿ ಮಹಿಳೆ ದೈಹಿಕ ಸಮಗ್ರತೆ, ಲೈಂಗಿಕ ದೌರ್ಜನ್ಯದಿಂದ ಮುಕ್ತವಾಗಲು, ಮತ ಚಲಾಯಿಸಲು, ಕಾನೂನು ಪಾಲನೆ ಬಗ್ಗೆ ಅರಿಯಲು ಕೌಟುಂಬಿಕ ಕಾನೂನಿನಲ್ಲಿ ಸಮಾನ ಹಕ್ಕುಗಳನ್ನು ಹೊಂದಲು ಹಾಗೂ ನ್ಯಾಯಾಯುತ ವೇತನ, ಆಸ್ತಿಯನ್ನು ಹೊಂದಲು ಮಹಿಳೆಯರು ಹಕ್ಕುಗಳ ಬಗ್ಗೆ ಅರಿಯುವುದು ತುಂಬಾ ಮುಖ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹ ನಿರ್ದೇಶಕಿ ಸೀತಮ್ಮ, ಬಣಕಲ್ ಚರ್ಚಿನ ಸಹಾಯಕ ಧರ್ಮಗುರು ಜಾರ್ಜ್ ಮೋನಿಸ್, ನಜರೆತ್ ಶಾಲೆಯ ಪ್ರಾಚಾರ್ಯೆ ಸಿಸ್ಟರ್ ಹಿಲ್ಡಾ ಲೋಬೊ, ದಿಲ್ ದಾರ್ ಬೇಗಂ, ಭಾರತೀ ಈಶ್ವರ್, ಪ್ರಮೀಳ ಲೋಬೊ, ಮೂಡಿಗೆರೆ ಪ.ಪಂ ಸದಸ್ಯ ಅನುಕುಮಾರ್, ಹೆಚ್.ಪಿ.ರಮೇಶ್, ಗ್ರಾ.ಪಂ ಸದಸ್ಯರಾದ ಮಹಮ್ಮದ್ ಇರ್ಫಾನ್, ದಿಲ್ ದಾರ್ ಬೇಗಂ, ಲೀಲಾವತಿ, ಆತೀಕಾ, ಝರೀನಾ, ಪ್ರಶಾಂತಿ, ವಿಂದ್ಯಾಯೋಗೇಶ್, ವಿದ್ಯಾ, ಕ್ರೈಸ್ತರ ಸಂಘದ ಅಧ್ಯಕ್ಷ ಮೆಲ್ವಿನ್ ಲಸ್ರಾದೊ, ಕಾರ್ಯದರ್ಶಿ ಪ್ರಶಾಂತಿ ಡಿಸೋಜ, ಮ್ಯೂರಲ್ ರೊಡ್ರಿಗಸ್ ಇದ್ದರು.