ಸರ್ಕಾರದ ಅವ್ಯವಸ್ಥೆಗೆ ನಾನು ಕುಟುಂಬದವರನ್ನು ಕಳೆದುಕೊಂಡೆ : ನಟ ಪವನ್.

155
firstsuddi

ಬೆಂಗಳೂರು : ಕಿರುತೆರೆ ನಟ ಗಟ್ಟಿಮೇಳದ ಪವನ್ ಕುಮಾರ್ ಅವರ ಕುಟುಂಬದಲ್ಲಿ ಇಬ್ಬರು ಕೊರೊನಾದಿಂದಾಗಿ ಬೆಡ್ ಸಿಗದೇ ಬಲಿಯಾಗಿದ್ದರು. ಪವನ್ ತಮ್ಮ ಕುಟುಂಬದವರನ್ನು ಕಳೆದುಕೊಂಡ ದುಖಃದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಮೂಲಕ ಜನರಿಗೆ ಕೊರೊನಾ ಬಗ್ಗೆ ಅರಿವು ಮೂಡಿಸಿದ್ದಾರೆ.

ತನ್ನ ಕುಟುಂಬದವರ ಸಾವಿನಿಂದ ನೊಂದ ಪವನ್ ಅವರು ಸರ್ಕಾರದ ಅವ್ಯವಸ್ಥೆಗೆ ನಾನು ಕುಟುಂಬದವರನ್ನು ಕಳೆದುಕೊಂಡೆ. ಎರಡು ದಿನಗಳ ಅಂತರದಲ್ಲಿ ನನ್ನ ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡ ನನಗೆ ಕೊರೊನಾದ ಬಗ್ಗೆ ನಿಜ ಅರಿವಾಗಿದೆ. ಸರ್ಕಾರ ಜನರ ಜೀವಕ್ಕೆ ಬೆಲೆ ಕೊಡುತ್ತಿಲ್ಲ. ನನ್ನ ಕಣ್ಣ ಎದುರಲ್ಲೇ ಭಾವ ಮತ್ತು ಭಾವನ ತಂದೆಯನ್ನು ಕೊರೊನ ಬಲಿ ಪಡೆದಿದೆ. ಸರ್ಕಾರ ಜನರಿಗೆ ಹೇಳುತ್ತಿರುವುದು ಬರಿ ಸುಳ್ಳು. ಎಂದು ಆಕ್ರೋಶ ಹೊರಹಾಕಿದ್ದಾರೆ.

ದಯವಿಟ್ಟು ಸಾರ್ವಜನಿಕರು ಮನೆಯಿಂದ ಹೊರ ಬರಬೇಡಿ. ಸರ್ಕಾರಕ್ಕೆ ನಮಗೆ ಬೇಕಾದ ಆಕ್ಸಿಜನ್ ಕೋಡುವುದಕ್ಕೆ ಆಗುತ್ತಿಲ್ಲ. ಸಾರ್ವಜನಿಕರು ದಯವಿಟ್ಟು ಎಚ್ಚರ ವಹಿಸಿಕೊಂಡು ನಿಮ್ಮ ಜೀವ ನೀವೇ ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.