ಸಿಎಂ ಆಗಮನ ಹಿನ್ನಲೆ ರಸ್ತೆ ಹಂಪ್ಸ್ ತೆರವು – ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು…

75
firstsuddi

ಚಿಕ್ಕೋಡಿ(ಬೆಳಗಾವಿ) : ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಸಿಎಂ ಸಂಚಾರ ಮಾಡುವ ರಸ್ತೆಯಲ್ಲಿ ಹಾಕಲಾಗಿದ್ದ ರಸ್ತೆ ಹಂಪ್ಸ್ ಗಳನ್ನು ತೆರವು ಮಾಡಿದ್ದಾರೆ. ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಕೇಶ್ವರ, ಹುಕ್ಕೇರಿ, ಬಡಕುಂದ್ರಿ ಮಾರ್ಗದ 50ಕ್ಕೂ ಹೆಚ್ಚು ಕಡೆ ರೋಡ್ ಹಂಪ್ಸ್ ತೆರವುಗೊಳಿಸಲಾಗಿದೆ. ಅಲ್ಲದೇ ಶಾಲಾ ಕಾಲೇಜುಗಳ ಬಳಿ ಅಳವಡಿಸಿದ್ದ ರೋಡ್ ಹಂಪ್ಸ್ ಗಳನ್ನು ಸಹ ತೆರವುಗೊಳಿಸಲಾಗಿದೆ. ಜನಸಾಮಾನ್ಯರಿಗೆ ಒಂದು ನ್ಯಾಯ ಸಿಎಂ ಹಾಗೂ ಸಚಿವರಿಗೆ ಒಂದು ನ್ಯಾಯನಾ ಎಂದು ಲೋಕೋಪಯೋಗಿ ಇಲಾಖೆ ವಿರುದ್ದ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.