ಸಿದ್ದಗಂಗಾ ಶ್ರೀಗಳ 114ನೇ ವರ್ಷದ ಹುಟ್ಟುಹಬ್ಬ – ಪ್ರಧಾನಿ ಮೋದಿಯಿಂದ ನಮನ…

135
firstsuddi

ತುಮುಕೂರು : ನಡೆದಾಡುವ ದೇವರು, ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 114ನೇ ವರ್ಷದ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ನಮನ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು ಡಾ. ಶ್ರೀ. ಶ್ರೀ. ಶ್ರೀ. ಶಿವಕುಮಾರ ಸ್ವಾಮಿಯವರ ಜಯಂತಿಯಂದು ನಾನು ಅವರಿಗೆ ನಮಸ್ಕರಿಸುತ್ತೇನೆ. ಅವರು ಸಮಾಜಕ್ಕೆ ಮಾಡಿದ ಸೇವೆ ಹಾಗೂ ಬಡವರ ಆರೈಕೆಗಾಗಿ ಅವರು ಮಾಡಿದ ಅಸಂಖ್ಯಾತ ಪ್ರಯತ್ನಗಳು ನೆನಪಿನಲ್ಲಿವೆ. ಅವರ ಉದಾತ್ತ ಆಲೋಚನೆಗಳು ಮತ್ತು ಆದರ್ಶಗಳಿಂದ ನಾವು ಸ್ಪೂರ್ತಿ ಪಡೆದಿದ್ದೇವೆ. ಎಂದು ಟ್ವೀಟ್ ಮಾಡಿದ್ದಾರೆ.