ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಕೆಜಿಎಫ್ ಬಾಬು ಕುಟುಂಬ…

90
firstsuddi

ಬೆಂಗಳೂರು : ಕೆಲದಿನಗಳ ಹಿಂದೆ ಸಚಿವ ಎಸ್.ಟಿ ಸೋಮಶೇಖರ್ ಮಗಳ ಮೇಲೆ ಅತ್ಯಾಚಾರ ಮಾಡಿದ್ದ ಕೆಜಿಎಫ್ ಬಾಬುಗೆ ಎಂಎಲ್‍ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ತಮ್ಮ ಕಚೇರಿಯಲ್ಲಿ ಹೆಂಡತಿ ಮಕ್ಕಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಕೆಜಿಎಫ್ ಬಾಬು ಸ್ಪಷ್ಟನೆ ನೀಡಿದ್ದಾರೆ.

ನನಗೆ ಹೆಂಡತಿ ಮಗಳು ಅಂದರೆ ಪ್ರಾಣ. ನಾನು ಮದುವೆ ಆದ ಎರಡನೇ ಹೆಂಡತಿ ನನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ನಾವಿಬ್ಬರು ಮದುವೆ ಆಗಿದ್ದು ಮೊದಲ ಹೆಂಡತಿಗೆ ಗೊತ್ತಿರಲಿಲ್ಲ. ನವೀದ್ ಅನ್ನೋನು ನನ್ನ ಮೊದಲ ಹೆಂಡತಿಗೆ ಈ ವಿಷಯ ತಿಳಿಸಿ ನಿಮಗೆ ಆಸ್ತಿ ಸಿಗಲ್ಲ ಅಂತ ತಲೆ ಕೆಡಿಸಿದ್ದರು. ಕಷ್ಟದಲ್ಲಿ ಮೊದಲ ಹೆಂಡತಿ ನನ್ನ ಜೊತೆಗಿದ್ದಳು ಹಾಗಾಗಿ ಅವಳನ್ನು ನಾನು ಬಿಡಲು ಸಿದ್ಧನಿರಲಿಲ್ಲ. ಸಾವಿರ ಕೋಟಿ ಕೇಸು ಹಾಕಿದ್ದೀಯಾ ಹುಚ್ಚಿ ಎಲ್ಲಾ ನೀನು ಬಂದ ಮೇಲೆ ಸಂಪಾದಿಸಿದ್ದು ಎಲ್ಲಾ ನಿನ್ನದೆ ನಾನೇ 2ನೇ ಹೆಂಡತಿಯನ್ನು ಕರೆದುಕೊಂಡು ಹೊರಗೆ ಹೋಗುತ್ತೇನೆ ಎಂದಿದ್ದೆ. ಆಗ ಅಲ್ಲೇ ಗಟ್ಡಿಯಾಗಿ ಹಿಡಿದು ಕೊಂಡು ಅತ್ತಳು ಆಮೇಲೆ ನಾವು ಒಟ್ಟಿಗೆ ಇದ್ದೇವೆ ಎಂದರು. ಅಲ್ಲದೇ ಎಸ್.ಟಿ ಸೋಮಶೇಖರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಲು ನಿರ್ಧಾರಿಸಿರುವುದಾಗಿ ತಿಳಿಸಿದರು.

ನಂತರ ಮಾತನಾಡಿದ ಮೊದಲ ಪತ್ನಿ ರುಕ್ಸಾನ, ನಮ್ಮನೆಯವರು ಎರಡನೇ ಮದುವೆ ಆದರು ಅಂತ ಜಗಳವಾಯಿತು. ಕೋಪದಲ್ಲಿ ಆವಾಗ ಕೇಸು ಹಾಕಿದ್ದೆ. ನಮ್ಮನೆಯವರು ದೇವರಂತ ಮನುಷ್ಯ. ಒಟ್ಟಿಗೆ ಬಾಳುತ್ತಿದ್ದೇವೆ. ಈ ಹಿಂದೆ ನಡೆದದ್ದು ಮುಗಿದ ಅಧ್ಯಾಯ. ರಾಜಕೀಯದಲ್ಲಿ ಅದೆಲ್ಲಾ ಮಾತನಾಡಿ ನಮ್ಮ ಮನೆ ಸಂಸಾರ ಹಾಳು ಮಾಡಬೇಡಿ. ಮಗಳ ಜೀವನ ಹಾಳುಮಾಡಬೇಡಿ ಎಂದು ಕಣ್ಣೀರು ಹಾಕಿದರು.

ಎರಡನೇ ಪತ್ನಿ ಶಾಝಿಯ ಮಾತನಾಡಿ, ರಾಜಕೀಯದಲ್ಲಿ ಯಾಕೆ ಆರೋಪ ಮಾಡ್ತೀರ ನಿಮ್ಮ ಮನೆಯಲ್ಲಿ ಹೆಂಡತಿ, ಮಕ್ಕಳು ಇಲ್ವಾ? ಕುಟುಂಬ ಬೇರೆ ರಾಜಕೀಯ ಬೇರೆ ಕುಟುಂಬದ ವಿಚಾರ ರಾಜಕೀಯಕ್ಕೆ ಯಾಕೆ ತರಬೇಕು? ರಾಜಕಾರಣದಲ್ಲಿ ಹೀಗಾಗುತ್ತೆ ಅಂತ ಗೊತ್ತಿದ್ದರೆ ಇಬ್ಬರು ಹೆಂಡತಿಯರು ಸೇರಿ ಬಾಬು ಅವರ ಕಾಲು ಹಿಡಿದು ರಾಜಕೀಯ ಬೇಡ ಎನ್ನುತ್ತಿದ್ದೆವು. ಎಂದರು.