ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದ ಸೈಲೆಂಟ್ ಸುನೀಲ – ಸದಸ್ಯತ್ವ ರದ್ದು ಮಾಡಿದ ಪಕ್ಷ…

38
firstsuddi

ಬೆಂಗಳೂರು : ರೌಡಿಶೀಟರ್ ಸೈಲೆಂಟ್ ಸುನೀಲ ಮಿಸ್ಡ್‌ಕಾಲ್ ಕೊಟ್ಟು ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದ. ಇದೀಗ ಆತನ ಬಿಜೆಪಿ ಸದಸ್ಯತ್ವವನ್ನು ಬೆಂಗಳೂರು ಕೇಂದ್ರ ಬಿಜೆಪಿ ಘಟಕ ರದ್ದುಗೊಳಿಸಿದೆ.

ಸುನೀಲ ಬಿಜೆಪಿ ಸೇರಿದ್ದ ಬಗ್ಗೆ ಫೋಟೋ ವೈರಲ್ ಆದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದ್ದು, ಸುನೀಲ ಹೆಸರಿನ ಸದಸ್ಯತ್ವಕ್ಕೂ ಬಿಜೆಪಿಗೂ ಸಂಬಂಧವೇ ಇಲ್ಲ ಎಂದು ಬೆಂಗಳೂರು ಕೇಂದ್ರ ಬಿಜೆಪಿ ಅಧ್ಯಕ್ಷ ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ಪಕ್ಷಕ್ಕೆ ಜನರನ್ನು ಸೇರಿಸಿಕೊಳ್ಳಲು ಮಿಸ್ಡ್‌ಕಾಲ್ ಅಭಿಯಾನ ಶುರು ಮಾಡಿದೆ. ಈ ಸಂಖ್ಯೆಗೆ ಮಿಸ್ಡ್‌ಕಾಲ್ ಕೊಟ್ಟು ಸೈಲೆಂಟ್ ಸುನೀಲ ಬಿಜೆಪಿ ಸದಸ್ಯತ್ವ ಪಡೆದಿದ್ದಾನೆ. ಈ ವಿಷಯ ತಿಳಿದ ಕೂಡಲೇ ಬೆಂಗಳೂರು ಕೇಂದ್ರ ಜಿಲ್ಲಾ ಘಟಕದಿಂದ ಸೈಲೆಂಟ್ ಸುನೀಲನ ಬಿಜೆಪಿ ಸದಸ್ಯತ್ವ ರದ್ದು ಮಾಡಲಾಗಿದೆ. ಸುನೀಲ ಸದಸ್ಯತ್ವ ರದ್ದಿನ ಬಗ್ಗೆ ರಾಜ್ಯ ಘಟಕಕ್ಕೂ ಶಿಫಾರಸು ಮಾಡಲಾಗಿದೆ. ಈ ರೀತಿಯ ಘಟನೆಯಿಂದ ಬಿಜೆಪಿಗೂ ಮುಜುಗರವಾಗಿದೆ ಎಂದು ತಿಳಿಸಿದ್ದಾರೆ.