ಬೆಂಗಳೂರು : ರಾಜ್ಯದಲ್ಲಿ ಹಿಜಬ್-ಕೇಸರಿ ಸಂಘರ್ಷದ ನಡುವೆಯೂ ಹೈಕೋರ್ಟ್ನಿಂದ ಶಾಲೆಗಳನ್ನು ಆರಂಭಿಸಲು ಆದೇಶ ಬಂದ ಹಿನ್ನೆಲೆ ಸೋಮವಾರದಿಂದ 10 ನೇ ತರಗತಿವರೆಗೆ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಶಕ್ತಿ ಭವನದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಶಾಲೆಗಳ ಡ್ರೆಸ್ ಕೋಡ್ ವಿವಾದ ಶುರುವಾಗಿತ್ತು. ಬಳಿಕ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಹೈಕೋರ್ಟ್ ಶಿಕ್ಷಣ ಕೇಂದಗಳನ್ನು ಮುಚ್ಚದಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸೋಮವಾರ ಪುನಾರಂಭಿಸಲಾಗುವುದು ಎಂದರು.
ಸೋಮವಾರದಿಂದ ಮೊದಲ ಹಂತವಾಗಿ 10 ನೇ ತರಗತಿವರೆಗೆ ಶಾಲೆ ಆರಂಭಿಸಿ, ನಂತರ ಡಿಗ್ರಿ, ಪಿಯು ಕಾಲೇಜುಗಳನ್ನು ಶುರು ಮಾಡಲಾಗುವುದು. ನಾಳೆ ಸಂಜೆ ಎಲ್ಲಾ ಸಚಿವರ, ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಆಯಾ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದರು.










