ಚಿತ್ರದುರ್ಗ : ಹಣ ದ್ವಿಗುಣ ವಂಚನೆ ಆರೋಪದ ಮೇಲೆ ಚಿತ್ರದುರ್ಗ ನಗರಸಭೆಯ 4ನೇ ವಾರ್ಡ್ ಜೆಡಿಎಸ್ ಸದಸ್ಯ ಚಂದ್ರಶೇಖರ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಚಂದ್ರಶೇಖರನ ಪತ್ನಿ ದೇವಿಕಾ, ಬಾಬು ಹಾಗೂ ಅರುಣ್ ಬಂಧಿತ ಆರೋಪಿಗಳು. ಚಂದ್ರಶೇಖರ್ ಖೋಟಾ ನೋಟು ಕಿಂಗ್ ಪಿನ್ ಎಂದೇ ಕುಖ್ಯಾತನಾಗಿದ್ದ. ಡಿಸೆಂಬರ್ 6 ರಂದು ದೊಡ್ಡಬಳ್ಳಾಪುರದ ನಾಗರಾಜ್ ಅವರಿಂದ 6ಲಕ್ಷ ನಗದು ಪಡೆದು 18 ಲಕ್ಷ ನೀಡುವುದಾಗಿ ನಂಬಿಸಿ ವಂಚಿಸಿರುವ ಬಗ್ಗೆ ಚಂದ್ರಶೇಖರ್ ವಿರುದ್ದ ಪ್ರಕರಣ ದಾಖಲಾಗಿತ್ತು.
ಚಿತ್ರದುರ್ಗದ ಬಡಾವಣೆ ಠಾಣೆ ಸಿಪಿಐ ಶಂಕರಪ್ಪ ನೇತೃತ್ವದ ತಂಡ ಚಂದ್ರಶೇಖರ್ ನನ್ನು ಆಂಧ್ರಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪ್ರಕರಣ ಭೇದಿಸಿದ ಎಲ್ಲಾ ಸಿಬ್ಬಂದಿಗೆ ಎಸ್ ಪಿ ರಾಧಿಕಾ ಅಭಿನಂದಿಸಿದ್ದಾರೆ.










