ಹಾಸನ : ಆಕಸ್ಮಿಕವಾಗಿ ನದಿಗೆ ಕಾಲು ಜಾರಿ ಬಿದ್ದು ಯುವಕ ಸಾವು…

108
firstsuddi

ಹಾಸನ : ಆಕಸ್ಮಿಕವಾಗಿ ನದಿಗೆ ಕಾಲು ಜಾರಿ ಬಿದ್ದು ಯುವಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಐಗೂರು ಗ್ರಾಮದಲ್ಲಿ ನಡೆದಿದೆ. ನವೀನ್(25) ಮೃತ ಯುವಕ ಎಂದು ಗುರುತಿಸಲಾಗಿದೆ. ಮೃತ ಯುವಕ ಇಂದು ಬೆಳಿಗ್ಗೆ ತಮ್ಮ ಜಾನುವಾರುಗಳೊಂದಿಗೆ ನದಿಯ ದಡದ ಮೇಲೆ ತೆರಳುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಶೋಧ ಕಾರ್ಯ ನಡೆಸಿ ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆ.