ಹಾಸನ : ಆಕಸ್ಮಿಕವಾಗಿ ಮೃತಪಟ್ಟಿದ್ದ ಮಂಗನ ತಿಥಿಕಾರ್ಯ ನೆರವೇರಿಸಿದ ಹೊಂಗೆರೆ ಗ್ರಾಮಸ್ಥರು…

234
firstsuddi

ಹಾಸನ : ಆಕಸ್ಮಿಕವಾಗಿ ಮೃತಪಟ್ಟಿದ್ದ ಮಂಗನ ತಿಥಿಕಾರ್ಯವನ್ನು ಗ್ರಾಮಸ್ಥರು ನೆರವೇರಿಸಿರುವ ಘಟನೆ ತಾಲ್ಲೂಕಿನ ಹೊಂಗೆರೆ ಗ್ರಾಮದಲ್ಲಿ ನಡೆದಿದೆ. ಕಳೆದ ಹದಿಮೂರು ದಿನಗಳ ಹಿಂದೆ ಹೊಂಗೆರೆ ಗ್ರಾಮದಲ್ಲಿ ಇದ್ದ ಮಂಗವೊಂದು ಆಕಸ್ಮಿಕವಾಗಿ ಸಾವನ್ನಪ್ಪಿತ್ತು, ಅದರ ಅಂತ್ಯಸಂಸ್ಕಾರವನ್ನು ಕೂಡಾ ಗ್ರಾಮಸ್ಥರು ನೆರವೇರಿಸಿದ್ದರು. ಇಂದು ಶಾಸ್ತ್ರೋಕ್ತವಾಗಿಯೇ ಹೊಂಗೆರೆ ಗ್ರಾಮದ ಜನರೆಲ್ಲರೂ ಸೇರಿ, ಹಣವನ್ನು ಸಂಗ್ರಹಿಸಿ ಎಡೆ ಇಟ್ಟು ಪ್ರೀತಿಯ ವಾನರನಿಗೆ 11 ನೇ ದಿನದ ತಿಥಿ ಕಾರ್ಯವನ್ನು ಮಾಡಿದ್ದು, ಅಷ್ಟೇ ಅಲ್ಲದೇ ಹೊಂಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರಿಗೆ ಊಟದ ವ್ಯವಸ್ಥೆಯನ್ನೂ ಕೂಡಾ ಮಾಡಿದರು.