ಹಾಸನ : ಸಿಲಿಂಡರ್ ಸ್ಪೋಟಗೊಂಡು ರೈತನ ಮನೆ, 3.5 ಲಕ್ಷ ರೂ ಮೌಲ್ಯದ ಕೊಬ್ಬರಿ ಬೆಂಕಿಗಾಹುತಿ…

193
firstsuddi

ಹಾಸನ : ಮಹಾಮಾರಿ ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರೊಬ್ಬರ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಮನೆ ಹಾಗೂ ಸುಮಾರು 3.5 ಲಕ್ಷ ರೂ ಬೆಲೆ ಬಾಳುವ ಕೊಬ್ಬರಿ ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಮೆಳ್ಳಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೆಳ್ಳಹಳ್ಳಿ ಗ್ರಾಮದ ರಮೇಶ್ ಎಂಬ ರೈತರ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದು, ಸ್ಪೋಟದ ತೀವ್ರತೆಗೆ ರೈತನ ಮನೆ ಹಾಗೂ ಸುಮಾರು 3.5 ಲಕ್ಷ ರೂ ಬೆಲೆ ಬಾಳುವ ಕೊಬ್ಬರಿ ಸಂಪೂರ್ಣ ಸುಟ್ಟು ಕರುಕಲಾಗಿವೆ. ಸಿಲಿಂಟರ್ ಸ್ಪೋಟದ ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂಧಿ ಬೆಂಕಿಯನ್ನು ನಂದಿಸಿದ್ದು, ಅದೃಷ್ಟಾವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದೀಗ ಮನೆ ಮತ್ತು ಲಕ್ಷಾಂತರ ಮೌಲ್ಯದ ಕೊಬ್ಬರಿ ಕಳೆದುಕೊಂಡ ರೈತನ ಸಂಕಷ್ಟಕ್ಕೆ ಸರ್ಕಾರ ಕೂಡಲೇ ಸ್ಪಂಧಿಸಬೇಕು ಎಂದು ಮನವಿ ಮಾಡಿದ್ದಾರೆ.