ಹಿಮಪಾತಕ್ಕೆ ಸಿಲುಕಿ ಹುತಾತ್ಮರಾದ ಕೊಡಗಿನ ವೀರ ಯೋಧನಿಗೆ ಅಂತಿಮ ವಿದಾಯ…

82
firstsuddi

ಮಡಿಕೇರಿ : ಹಿಮಪಾತಕ್ಕೆ ಸಿಲುಕಿ ಹುತಾತ್ಮರಾದ ಕೊಡಗಿನ ವೀರಯೋಧ ಅಲ್ತಾಫ್ ಅಹ್ಮದ್ (37) ಅವರಿಗೆ ಸಕಲ ಸರ್ಕಾರಿ ಹಾಗೂ ಮಿಲಿಟರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಯೋಧನ ಕುಟುಂಬಸ್ಥರು ಮತ್ತು ಅಧಿಕಾರಿಗಳು, ಸಾರ್ವಜನಿಕರು ವಿರಾಜಪೇಟೆ ತಾಲೂಕು ಮೈದಾನದಲ್ಲಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಭಾರತೀಯ ಸೇನೆ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯಿಂದ 21 ಸುತ್ತು ಕುಶಾಲತೋಪು ಸಿಡಿಸಿ ಯೋಧ ಅಲ್ತಾಫ್ ಅಹ್ಮದ್ ಗೆ ಗೌರವ ಸಲ್ಲಿಸಲಾಯಿತು.

ಅಲ್ತಾಫ್ ಕುಟುಂಬಕ್ಕೆ ಸೇನೆಯಿಂದ ತ್ರಿವರ್ಣ ಧ್ವಜ ಹಸ್ತಾಂತರ ಮಾಡುವ ವೇಳೆ ಯೋಧನ ಪತ್ನಿ ಜುಬೇರಿಯಾ ಕುಸಿದು ಬಿದ್ದರು. ಅಲ್ಲದೇ ಯೋಧನ ಮಗಳು ಹಾಗೂ ಮಗ ಸೈನಿಕರ ಸಮವಸ್ತ್ರ ಧರಿಸಿ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ದೇಶ ಪ್ರೇಮದ ಸಂದೇಶ ಸಾರಿದರು. ವಿರಾಜಪೇಟೆ ತಾಲೂಕು ಮೈದಾನದಿಂದ ಇದ್ಗಾ ಮೈದಾನಕ್ಕೆ ಯೋಧನ ಮೆರವಣಿಗೆ ನಡೆಯಿತು. ನಂತರ ಇದ್ಗಾ ಮೈದಾನದಲ್ಲಿ ಅಂತ್ಯಕ್ರಿಯೆ ನಡೆಯಿತು.

ಫೆಬ್ರವರಿ 23ರಂದು ಶ್ರಿನಗರದಲ್ಲಿ ಹಿಮಪಾತಕ್ಕೆ ಸಿಲುಕಿ ಕೊಡಗು ಮೂಲದ ಯೋಧ ಹವಾಲ್ದಾರ್ ಅಲ್ತಾಫ್ ಅಹ್ಮದ್ ಹುತಾತ್ಮರಾಗಿದ್ದರು.