ಹೊಸ ಸರಳೀಕೃತ ಕ್ರಮ ಜಾರಿಗೆ ತರುವವರೆಗೆ ಟೋಯಿಂಗ್ ಸ್ಥಗಿತ : ಆರಗ ಜ್ಞಾನೇಂದ್ರ.

93
firstsuddi

ಬೆಂಗಳೂರು : ಹೊಸ ಸರಳೀಕೃತ ಕ್ರಮಗಳನ್ನು ಜಾರಿಗೆ ತರುವವರೆಗೆ ನಗರದಲ್ಲಿ ಟೋಯಿಂಗ್ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ನಗರದಲ್ಲಿ ಟೋಯಿಂಗ್ ಕಿರಿಕಿರಿ ಸಂಬಂಧ ಆರಗ ಜ್ಞಾನೇಂದ್ರ ಅವರು ನಿನ್ನೆ ಟ್ರಾಫಿಕ್ ಆಯುಕ್ತರು ,ಟೋಯಿಂಗ್ ಸಿಬ್ಬಂದಿ ಜೊತೆ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಅವರು, ಹೊಸ ಸರಳೀಕೃತ ವ್ಯವಸ್ಥೆ ಬರುವವರೆಗೆ ನಗರದಲ್ಲಿ 15 ದಿನ ಟೋಯಿಂಗ್ ಸ್ಥಗಿತಗೊಳಿಸಲಾಗುವುದು. ನೋಪಾರ್ಕಿಂಗ್ ನಲ್ಲಿ ಪಾರ್ಕ್ ಮಾಡಿದ್ರೆ ಪ್ರಕರಣ ದಾಖಲಾಗುತ್ತದೆ. ನೋ ಪಾರ್ಕಿಂಗ್ ಬೋರ್ಡ್ ಗಳು ಈ ಹಿಂದೆ 50 ಮೀಟರ್ ನಲ್ಲಿ ಇತ್ತು. ಇನ್ನುಮುಂದೆ 25 ಮೀಟರ್ ನಲ್ಲಿ ಬೋರ್ಡ್ ಅಳವಡಿಕೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ಟೋಯಿಂಗ್ ಬಗ್ಗೆ ಸಾರ್ವಜನಿಕರ ಹೇಳಿಕೆಗಳನ್ನ ಗೌರವಿಸಲಾಗುತ್ತಿದೆ. ಅದೇ ಕಾರಣಕ್ಕೆ ಸದ್ಯಕ್ಕೆ ಟೋಯಿಂಗ್ ನಿಲ್ಲಿಸಿದ್ದೇವೆ. ಈ ಸಂಬಂಧ ಪೂರ್ವಭಾವಿ ಚರ್ಚೆಯನ್ನು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಸಿಎಂ ಜೊತೆ ಚರ್ಚಿಸಿ ಏನು ಅನ್ನೋದನ್ನ ಘೋಷಿಸಲಾಗುವುದು. ಮುಂದೆ ಯಾವುದೇ ಕಾರಣಕ್ಕೂ ಜನರಿಗೆ ತೊಂದರೆ ಆಗಬಾರದು ಎಂಬುದು ನಮ್ಮ ಆಶಯ ಎಂದು ಹೇಳಿದರು.