ಅಂಧ ವ್ಯಕ್ತಿ ಪುತ್ರಿಯ ಮಾತು ಕೇಳಿ ಭಾವುಕರಾದ ಮೋದಿ.

55
firstsuddi

ಗಾಂಧೀನಗರ : ಗುಜರಾತ್ ನ ಭರೂಚ್ ನಲ್ಲಿ ಆಯೋಜನೆಗೊಂಡಿದ್ದ ಉತ್ಕರ್ಷ್ ಸಮಾರೋಹ್ ಕಾರ್ಯಕ್ರಮದಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ ನರೇಂದ್ರ ಮೋದಿ ಅವರು ಮಾತನಾಡಿದರು. ಈ ವೇಳೆ, ಫಲಾನುಭವಿಯೊಬ್ಬರ ಪುತ್ರಿಯ ಮಾತು ಕೇಳಿ ಅವರು ಭಾವುಕರಾಗಿದ್ದಾರೆ.

ಕಾರ್ಯಕ್ರಮದಲ್ಲಿ ದೃಷ್ಟಿಹೀನ ಸಮಸ್ಯೆಯಿಂದ ಬಳಲುತ್ತಿರುವ ಅಯೂಬ್ ಪಟೇಲ್ ಎಂಬುವವರು , ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರಲ್ಲಿ ನನ್ನ ಹಿರಿಯ ಮಗಳು ವೈದ್ಯೆಯಾಗಬೇಕೆಂಬ ಆಸೆಯನ್ನು ಹೊಂದಿದ್ದಾಳೆ ಎನ್ನುತ್ತಾರೆ. ಈ ವೇಳೆ ವೈದ್ಯಕೀಯ ವೃತ್ತಿ ಆಯ್ಕೆ ಮಾಡಿಕೊಳ್ಳಲು ಕಾರಣ ಏನು ಎಂದು ಪ್ರಧಾನಿ ಮೋದಿ ಕೇಳಿದಾಗ, ‘ನನ್ನ ತಂದೆ ದೃಷ್ಟಿ ಹೀನತೆಯಿಂದ ಬಳಲುತ್ತಿರುವ ಸಮಸ್ಯೆ ಹೋಗಲಾಡಿಸಲು ನಾನು ವೈದ್ಯನಾಗಲು ಬಯಸುತ್ತೇನೆ’ ಎಂದರು. ಬಾಲಕಿಯ ಮಾತು ಕೇಳಿ ಮೋದಿ ಭಾವೋದ್ವೇಗಕ್ಕೊಳಗಾದರು. ಈ ವೇಳೆ ಕೆಲಹೊತ್ತು ಮೌನಕ್ಕೆ ಶರಣಾದ ಘಟನೆ ಸಹ ನಡೆಯಿತು. ಇದರ ಬೆನ್ನಲ್ಲೇ ಬಾಲಕಿಯ ನಿರ್ಧಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಇದೇ ವೇಳೆ ಈದ್ ಹಾಗೂ ರಂಜಾನ್ ಹಬ್ಬವನ್ನು ಹೇಗೆ ಆಚರಿಸಿದ್ರಿ ಎಂದು ಕೇಳುತ್ತಾ, ನಿಮ್ಮ ಮಗಳ ವೈದ್ಯಕೀಯ ಶಿಕ್ಷಣಕ್ಕೆ ಏನಾದರೂ ಸಹಾಯದ ಅಗತ್ಯವಿದ್ದರೆ ತಿಳಿಸಿ. ನೀವು ನಿಮ್ಮ ಮಗಳ ಕನಸನ್ನು ನನಸಾಗಿಸಬೇಕು ಎಂದು ಅಯೂಬ್ ಅವರಿಗೆ ಹೇಳಿದ್ದಾರೆ.