ಅಂಬೇಡ್ಕರ್ ಭಾವಚಿತ್ರ ಅಳವಡಿಸದಿದ್ದಕ್ಕೆ ಅನ್ನದಾನಿ ಆಕ್ರೋಶ – ಸ್ಪೀಕರ್ ಗರಂ…

75
firstsuddi

ಬೆಳಗಾವಿ : ಸುವರ್ಣ ಸೌಧದ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ಹಾಕಬೇಕು ಅಂತಾ ಹೇಳಿ ಎರಡು ವರ್ಷ ಆದ್ರೂ ಹಾಕಿಲ್ಲ ಎಂದು ಮಳವಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಅನ್ನದಾನಿ ನಡೆಗೆ ಗರಂ ಆದರು. ಇದ್ದಕ್ಕಿಂದಂತೆ ಏನೋ ವಿಚಾರ ತೆಗೆದು ಮಾತನಾಡಿದರೆ ಹೇಗೆ?. ನಾನು ಸಾವಿರ ಬಾರಿ ಹೇಳಿದ್ದೇನೆ. ಅಶಿಸ್ತು ಸಹಿಸುವುದಿಲ್ಲ ಅಂತ. ಕಲಾಪ ಆರಂಭಕ್ಕೂ ಮುನ್ನ ನನ್ನಲ್ಲಿ ಬಂದು ಹೇಳಿ ಪ್ರಸ್ತಾಪ ಮಾಡಿದರೆ ಅದಕ್ಕೆ ಅರ್ಥ ಇರುತ್ತದೆ. ಬೇಜವಾಬ್ದಾರಿಯಿಂದ ವರ್ತಿಸಿದರೆ ಹೇಗೆ?. ನೀವು ಹೇಳಿರುವ ವಿಚಾರ ಜಾರಿಗೆ ತರಲು ಸದನ ಬದ್ಧವಾಗಿದೆ. ಅಂಬೇಡ್ಕರ್ ಫೋಟೋ ಹಾಕುವ ವಿಚಾರ ಕಲಾಪದಲ್ಲಿ ಚರ್ಚೆಯ ವಿಚಾರ ಅಲ್ಲ. ಅಂಬೇಡ್ಕರ್ ಫೋಟೋ ಹಾಕಿಯೇ ಹಾಕ್ತೀವಿ. ಅಂಬೇಡ್ಕರ್ ಫೋಟೋ ಒಳಗೊಂಡಂತೆ ಇನ್ನೂ ಯಾರದೆಲ್ಲ ಫೋಟೋ ಹಾಕಬೇಕು ಎಂದು ಪ್ರಮುಖ ನಾಯಕರ ಸಲಹೆ ಪಡೆದು ಹಾಕ್ತೀವಿ ಎಂದ ಸ್ಪೀಕರ್ ಕಾಗೇರಿ ಸ್ಪಷ್ಟಪಡಿಸಿದರು.