ಬಿಗ್ ಬಾಸ್ ಮಾಜಿ ಸ್ಪರ್ಧಿ, ಟಿಕ್ ಟಾಕ್ ಸ್ಟಾರ್ ಎಂದೇ ಖ್ಯಾತರಾಗಿದ್ದ ಸೋನು ಶ್ರೀನಿವಾಸ್ ಗೌಡ ಅವರು ಅರೆಸ್ಟ್ ಆಗಿದ್ದಾರೆ.
ಮಗುವನ್ನು ಅನಧಿಕೃತವಾಗಿ ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ಸೋನು ಅನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಜಂಟಿ ಕಾರ್ಯಚರಣೆ ವೇಳೆ ಬಂಧನವಾಗಿದೆ.
ಏಳು ವರ್ಷದ ಮಗುವನ್ನು ಕಾನೂನು ಬಾಹಿರವಾಗಿ ಅವರು ದತ್ತು ಪಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ನೀಡಿದ್ದರು. ಜೆ.ಜೆ.ಆ್ಯಕ್ಟ್ ಅಡಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಈ ಹಿಂದೆಯಷ್ಟೇ ಸೋನು ಶ್ರೀನಿವಾಸ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಮಗು ದತ್ತು ಪಡೆದಿರುವ ಬಗ್ಗೆ ಟ್ರೋಲ್ ಆಗಿದ್ದರು. ಸ್ವತಃ ಸೋನು ಗೌಡ ಅವರೇ ಆ ಮಗುವನ್ನು ಇಟ್ಟುಕೊಂಡು ವಿಡಿಯೋ ಕೂಡ ಮಾಡಿದ್ದರು. ಈ ಮಗುವಿನ ಪರಿಚಯವನ್ನು ಸೋನು ಸೋಷಿಯಲ್ ಮೀಡಿಯಾದಲ್ಲಿ ಮಾಡಿದ್ದರು.
ದತ್ತು ಪಡೆಯುವ ಯಾವುದೇ ನಿಯಮವನ್ನು ದತ್ತು ಪಾಲಿಸದೇ ಇರುವ ಕಾರಣಕ್ಕಾಗಿ ಮಕ್ಕಳ ಹಕ್ಕು ಕಸಿದಿರುವ ಆರೋಪ ಸೋನು ಮೇಲಿದೆ. ಉತ್ತರ ಕರ್ನಾಟಕದ 8 ವರ್ಷದ ಮಗು ಅದಾಗಿದ್ದು, ಸಿಂಪತಿ ಗಿಟ್ಟಿಸಿಕೊಂಡು ಸೆಲೆಬ್ರಿಟಿ ಆಗಲು ಸೋನು ಮುಂದಾಗಿದ್ದರು ಎನ್ನುವ ಆರೋಪ ಕೂಡ ಇದೆ. ಮಗುವನ್ನ ದತ್ತು ಪಡೆದ ಮೇಲೆ ಸುಳ್ಳು ಪ್ರಚಾರ ಗಿಟ್ಟಿಸಿಕೊಳ್ಳಲು ಸೋನು ತಂತ್ರ ರೂಪಿಸಿದ್ದರು ಎಂದು ಹೇಳಲಾಗುತ್ತಿದೆ.










