ಚಿಕ್ಕಮಗಳೂರು- ಹೆಂಡತಿಯ ಅಕ್ರಮ ಸಂಬಂಧವನ್ನ ಕಣ್ಣಾರೆ ಕಂಡು ಆಕ್ರೋಶಗೊಂಡ ಪತಿಯೊಬ್ಬ ಹೆಂಡತಿ ತಲೆ ಕಡಿದು ಪೊಲೀಸ್ ಸ್ಟೇಷನ್ ತಂದು ಶರಣಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದಲ್ಲಿ ನಡೆದಿದೆ. ರೂಪ (30 )ಕೊಲೆಯಾದ ಮಹಿಳೆ. ರೂಪಳನ್ನ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಸತೀಶ್ ನೇ ಈ ಕೊಲೆ ಮಾಡಿದ ಆರೋಪಿ. ಆರೋಪಿ ಸತೀಶ್ ಪತ್ನಿಯನ್ನ ಕೊಂದು ತಲೆಯನ್ನ ಬ್ಯಾಗ್‍ನಲ್ಲಿಟ್ಟುಕೊಂಡು ಶಿವನಿ ರೈಲ್ವೆ ಸ್ಟೇಷನ್‍ನಿಂದ ಅಜ್ಜಂಪುರ ಠಾಣೆಗೆ ಬಂದ ಶರಣಾಗಿದ್ದಾನೆ. ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದು ಪೋಲೀಸರು ತನಿಖೆ ಆರಂಭಿಸಿದ್ದಾರೆ…










