ಅಡಿಕೆ ಕದಿಯಲು ಹೋಗಿ ಮರಗಳನ್ನೇ ಕಡಿಯುತ್ತಿದ್ದ ಕಳ್ಳ – ಹಿಗ್ಗಾಮುಗ್ಗ ಥಳಿಸಿ ಠಾಣೆಗೆ ಕರೆದೊಯ್ದ ಸ್ಥಳೀಯರು…

101
firstsuddi

ಚಿಕ್ಕಮಗಳೂರು : ಅಡಿಕೆ ಕದಿಯಲು ಹೋಗಿ ಮರಗಳನ್ನೇ ಕಡಿಯುತ್ತಿದ್ದ ಕಳ್ಳನನ್ನು ಹಿಡಿದ ಸ್ಥಳೀಯರು ರಸ್ತೆಯುದ್ದಕ್ಕೂ ಹಿಗ್ಗಾಮುಗ್ಗ ಥಳಿಸಿ ಠಾಣೆಗೆ ಕರೆದೊಯ್ದ ಘಟನೆ ಬಾಳೆಹೊನ್ನೂರಿನಲ್ಲಿ ನಡೆದಿದೆ.

ಶ್ರೀನಿವಾಸ್ ಎಂಬಾತ ಬಾಳೆಹೊನ್ನೂರಿನಲ್ಲಿ ಹಲವು ದಿನಗಳಿಂದ ಅಡಿಕೆ ಕಳ್ಳತನ ಮಾಡುತ್ತಿದ್ದ. ಅಡಿಕೆಗಳನ್ನು ಕದಿಯಲು ಸುಮಾರು 70 ಅಡಿಕೆ ಮರಗಳನ್ನೇ ಕಡಿದುಹಾಕಿದ್ದಾನೆ. 3,500 ಕೆಜಿಗೂ ಅಧಿಕ ಹಸಿ ಅಡಿಕೆಯನ್ನು ಕಳ್ಳತನ ಮಾಡಿದ್ದ. ಮತ್ತೊಮ್ಮೆ ಕಳ್ಳತನ ಮಾಡುವಾಗ ಸಿಕ್ಕಿಬಿದ್ದ ಕಳ್ಳನನ್ನು ಹಿಡಿದ ಸ್ಥಳೀಯರು ಥಳಿಸಿ ಬಾಳೆಹೊನ್ನೂರು ಪೊಲೀಸರಿಗೆ ಒಪ್ಪಿಸಿದ್ದಾರೆ.