ಅನುಶ್ರೀ ಬಗ್ಗೆ ನಾನು ಏನೂ ಹೇಳಿಲ್ಲ : ಕಿಶೋರ್ ಅಮನ್ ಶೆಟ್ಟಿ.

79
firstsuddi

ಮಂಗಳೂರು : ಅನುಶ್ರೀ ಬಗ್ಗೆ ನಾನು ಏನೂ ಹೇಳಿಲ್ಲ. ಚಾರ್ಜ್ ಶೀಟ್ ನಲ್ಲಿರುವುದು ನನ್ನ ಹೇಳಿಕೆ ಅಲ್ಲ ಎಂದು ಡ್ರಗ್ಸ್ ಆರೋಪವನ್ನು ಎದುರಿಸುತ್ತಿರುವ ಕಿಶೋರ್ ಅಮನ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ನಾನು ಅನುಶ್ರೀ ಅವರಿಗೆ ಕೊರಿಯೋಗ್ರಾಫ್ ಮಾಡಿದ್ದೇನೆ ಅಷ್ಟೇ. ಅದರ ಹೊರತಾಗಿ ಅವರೊಂದಿಗೆ ನನ್ನ ಒಡನಾಟ ಅಷ್ಟೊಂದು ಇಲ್ಲ. ಎಲ್ಲವೂ ಸುಳ್ಳು ಸುದ್ದಿಗಳು, ಅನುಶ್ರೀ ವಿರುದ್ಧ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸುಳ್ಳು. ಜಾರ್ಜ್ ಶೀಟ್ ನಲ್ಲಿ ಸುಳ್ಳು ಹೇಳಿಕೆ ಹಾಕಲಾಗಿದೆ. ಅನುಶ್ರೀ ತುಂಬಾ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಅವರಿಗೆ ತುಂಬಾ ಗೌರವ ಕೊಡುತ್ತೇವೆ. ನಾನು ಅವರಿಗೆ ಬರೀ ಕೊರಿಯೋಗ್ರಾಫ್ ಮಾತ್ರ ಮಾಡಿದ್ದೇನೆ. ಫೋನ್ ಸಂಪರ್ಕವೂ ಇಲ್ಲ. ಅವರ ಫೋನ್ ನಂಬರ್ ಕೂಡ ನನ್ನ ಬಳಿ ಇಲ್ಲ ಎಂದರು.

ನನ್ನ ಲೈಫ್ ಹಾಳು ಮಾಡುತ್ತಿದ್ದಾರೆ. ಯಾರು ಈ ರೀತಿ ಮಾಡುತ್ತಿದ್ದಾರೆ ಗೊತ್ತಿಲ್ಲ. ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ಯಾರು ಈ ರೀತಿ ಮಾಡುತ್ತಾರೋ ಅವೆರಿಗೆ ಒಳ್ಳೆಯದಾಗಲಿ ಎಂದು ಬೆಸರ ವ್ಯಕ್ತಪಡಿಸಿದ ಅವರು, ಪಾರ್ಟಿಗೆ ಹೋಗುತ್ತಿದ್ದೇನೆ, ಆದರೆ ಡ್ರಗ್ಸ್ ಪಾರ್ಟಿಗಳಿಗೆಲ್ಲ ಹೋಗಿಲ್ಲ ಎಂದರು.