ತುಮಕೂರು : ಅನೈತಿಕ ಸಂಬಂಧಕ್ಕೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ವಿವಾಹಿತೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಪಾವಗಡ ತಾಲ್ಲೂಕಿನ ಮುರರಾಯನಹಳ್ಳಿಯಲ್ಲಿ ನಡೆದಿದೆ. ಸುಜಾತ(34) ಮೃತ ಮಹಿಳೆ ಎಂದು ಗುರುತಿಸಲಾಗಿದ್ದು, ಸುಜಾತ ಅವರು ವಿವಾಹವಾಗಿ ಪತಿಯೊಂದಿಗೆ ವಾಸಿಸುತ್ತಿದ್ದರು. ಇಂದು ಸುಜಾತ ಅವರ ಪತಿ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಆರೋಪಿ ಗಿರೀಶ್ ಮನೆಯೊಳಗೆ ನುಗಿದ್ದು, ಈ ವೇಳೆ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಸುಜಾತ ಅವರಿಗೆ ಪೀಡಿಸುತ್ತಿದ್ದರು. ಆದರೆ ಮಹಿಳೆ ಇದನ್ನು ವಿರೋಧಿಸಿ ತನ್ನ ಪತಿಗೆ ತಿಳಿಸುವುದಾಗಿ ಹೇಳಿದ್ದು, ಇದರಿಂದ ಕೋಪಗೊಂಡ ಗಿರೀಶ್ ಮನೆಯಲ್ಲಿದ್ದ ಸೀಮೆ ಎಣ್ಣೆಯನ್ನು ಸುಜಾತ ಅವರ ಮೇಲೆ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪಾವಗಡ ಪೊಲೀಸರು ಆರೋಪಿ ಗಿರೀಶ್ ಬಾಬು ಅವರನ್ನು ಬಂಧಿಸಿದ್ದಾರೆ.










