ಅನೈತಿಕ ಸಂಬಂಧ ಇಟ್ಟುಕೊಂಡಿರುವ ವ್ಯಕ್ತಿ ನಮ್ಮ ಜತೆ ಇರಬೇಕೆಂದು ಒತ್ತಾಯ- ಟ್ರಾನ್ಸ್ ಫಾರ್ಮರ್ ಕಂಬವೇರಿ ಹೈ ಡ್ರಾಮ ಸೃಷ್ಟಿಸಿದ 3 ಮಕ್ಕಳ ತಾಯಿ…

44
firstsuddi

ಗೋರಖ್‌ಪುರ: ಇತ್ತೀಚಿನ ದಿನಗಳಲ್ಲಿ ಮದುವೆಯ ನಂತರ ಕೆಲವೊಬ್ಬರು ವಿವಾಹೇತರ ಸಂಬಂಧದಲ್ಲಿ ತೊಡಗುತ್ತಾರೆ. ಅದು ಅವರ ವೈವಾಹಿಕ ಜೀವನವನ್ನು ನಾಶ ಪಡಿಸುವುದಂತು ಖಂಡಿತ. ಅದೇ ರೀತಿಯ ಘಟನೆಯೊಂದು ಇದೀಗ ನಡೆದಿದ್ದು, ಮಹಿಳೆಯೊಬ್ಬಳು ಕಳೆದ 7 ವರ್ಷಗಳಿಂದ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇತ್ತೀಚೆಗೆ ಅನುಮಾನಗೊಂಡ ಪತಿ ಈ ಅನೈತಿಕ ಸಂಬಂಧವನ್ನು ಪತ್ತೆ ಹಚ್ಚಿದ್ದಾನೆ. ಪತಿಗೆ ತನ್ನ ಅಕ್ರಮ ಸಂಬಂಧ ಮಾಹಿತಿ ತಿಳಿಯುತ್ತಿದ್ದಂತೆ ಪತ್ನಿ ರಂಪಾಟ ಶುರುಮಾಡಿದ್ದಾಳೆ.

ಪೈಪರಾಚ್ ಗ್ರಾಮದ ರಾಮ್ ಗೋವಿಂದ್ ಎಂಬವರ ಪತ್ನಿ, 34 ವರ್ಷದ ಮಹಿಳೆಗೆ ಮೂವರು ಮಕ್ಕಳಿದ್ದರು. ಕಳೆದ 7 ವರ್ಷಗಳಿಂದ ಈಕೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ. ಇವರಿಬ್ಬರ ಲವ್ವಿ ಡವ್ವಿ ಜೋರಾಗೆ ನಡೆಯುತ್ತಿತ್ತು. ಆದರೆ ಪತಿಗೆ ಗೊತ್ತೇ ಆಗಲಿಲ್ಲ. ಇತ್ತೀಚೆಗೆ ಪತ್ನಿಯ ನಡೆಗಳು ಅನುಮಾನ ತಂದಿತ್ತು. ಹೀಗಾಗಿ ಪತ್ನಿಯನ್ನು ಪ್ರಶ್ನಿಸಿದ್ದಾನೆ. ಆದರೆ ತಾನು ಪತಿವೃತೆ ಅನ್ನೋದನ್ನು ಎಲ್ಲಿಬೇಕಾದರು ಸಾಬೀತುಪಡಿಸುತ್ತೇನೆ ಎಂದು ಹೇಳಿ ಗದರಿಸಿದ್ದಳು. ಹೀಗಾಗಿ ಪತಿ ರಾಮ್ ಗೋವಿಂದ್ ಸುಮ್ಮನಾಗಿದ್ದ. ಇತ್ತೀಚೆಗೆ ಪತ್ನಿಯ ಅನೈತಿಕ ಸಂಬಂಧವನ್ನು ರೆಡ್ ಹ್ಯಾಂಡ್ ಆಗಿ ಪತಿ ಪತ್ತೆ ಹಚ್ಚಿದ್ದಾನೆ.

ಪತ್ನಿಯ ರಹಸ್ಯ ಸಂಬಂಧ ಗುಟ್ಟು ಬಯಲಾಗಿದೆ. ಆಕ್ರೋಶಗೊಂಡ ರಾಮ್ ಗೋವಿಂದ್ ಪತ್ನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಈ ವೇಳೆ ಪತ್ನಿಯ ಬೇಡಿಕೆ ಕೇಳಿ ಮತ್ತಷ್ಟು ಕೆರಳಿದ್ದಾನೆ. ಅನೈತಿಕ ಸಂಬಂಧ ಇಟ್ಟುಕೊಂಡಿರುವ ವ್ಯಕ್ತಿಯನ್ನು ಇದೇ ಮನೆಯಲ್ಲಿ ಇಟ್ಟುಕೊಳ್ಳಲು ಬೇಡಿಕೆ ಇಟ್ಟಿದ್ದಾಳೆ. ಇಷ್ಟೇ ಅಲ್ಲ ಆತನಿಗೆ ಕೆಲಸವಿಲ್ಲ, ಹೀಗಾಗಿ ಒಂದಿಷ್ಟು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ.

ಈಕೆಯ ಮಾತಿಗೆ ಆಕ್ರೋಶಗೊಂಡ ಪತಿ ಆಕೆಯನ್ನು ಮನೆಯಿಂದ ಹೊರದಬ್ಬಿದ್ದಾನೆ. ಇತ್ತ ಪತ್ನಿ ಮನೆಯ ಪಕ್ಕದಲ್ಲಿದ್ದ ಹೈಟೆನ್ಶನ್ ವೈಯರ್ ಇರುವ ವಿದ್ಯುತ್ ಕಂಬ ಹತ್ತಿದ್ದಾಳೆ. ಮಹಿಳೆ ವಿದ್ಯುತ್ ಕಂಬ ಹತ್ತುತ್ತಿದ್ದಂತೆ ಸ್ಥಳೀಯರು ಆಗಮಿಸಿ ಕೆಳಗಿಳಿಯಲು ಸೂಚಿಸಿದ್ದಾರೆ. ಪತಿಗೆ ಬೈಯುತ್ತಾ ವಿದ್ಯುತ್ ಕಂಬ ಹತ್ತುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇತ್ತ ಪೊಲೀಸರು ವಿದ್ಯುತ್ ಇಲಾಖೆ ಅಧಿಕಾರಿಗಳಿಗ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.

ವಿದ್ಯುಕ್ ಕಂಬ ಮೇಲೇರಿ ವೈಯರ್ ಹಿಡಿದು ಕುಳಿತ ಈಕೆಯನ್ನು ಕೆಳಗಿಳಿಸಲು ಸ್ಥಳೀಯರು, ಪೊಲೀಸರು ಹಾಗೂ ವಿದ್ಯುತ್ ಇಲಾಖೆ ಸಿಬ್ಬಂದಿಗಳು ಹರಸಾಹಸ ಮಾಡಿದ್ದಾರೆ. ಇದೀಗ ಪ್ರಕರಣ ದಾಖಲಾಗಿದ್ದು, ತನಿಖೆ ಎದುರಿಸುತ್ತಿದ್ದಾರೆ.