ಮೈಸೂರು : ದಸರಾ ಮಹೋತ್ಸಕ್ಕೆ ವೈವಿಧ್ಯಮಯ ಕಾರ್ಯಕ್ರಮಗಳು ಮೆರುಗು ನೀಡಲಿದ್ದು, ಅ.7ರಿಂದ 13ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಅರಮನೆ ಮುಂಭಾಗ ಅ.7ರಿಂದ 13ರವರೆಗೆ ಸಂಜೆ 6ರಿಂದ 9.30 ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಅ.10ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ 24ಗಂಟೆಗಳ ಕಾಲ ಕಾರ್ಯಕ್ರಮ ಆಯೋಜಿಸಲಾಗಿದೆ. ಕಲಾಮಂದಿರದಲ್ಲಿ ಅ.11 ಮತ್ತು 12ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಇದೇ ಮೊದಲ ಬಾರಿಗೆ ನಂಜನಗೂಗೆ ನಂಜುಂಡೇಶ್ವರ ದೇವಸ್ಥಾನದ ಆವರಣದಲ್ಲಿ ಅ.7ರಿಂದ 13ರವರೆಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈಗಾಗಲೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವ ಕಲಾವಿದರ ಪಟ್ಟಿಯನ್ನು ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು ಆನ್ಲೈನ್ ಮೂಲಕ ವೀಕ್ಷಿಸಬಹುದು ಅ.7ರಂದು ಸಂಜೆ 6ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದು, ರಾಜ್ಯಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಅರಮನೆ ಕಾರ್ಯಕ್ರಮ: ಸೆ.7ಕ್ಕೆ ಬೆಂಗಳೂರಿನ ಪ್ರಭಾತ್ ತಂಡ ಕರ್ನಾಟಕ ವೈಭ ನೃತ್ಯ ರೂಪಕ ನೀಡಲಿದ್ದು, ಅ.8ರಂದು ಸಂಜೆ.6ಕ್ಕೆ ಮಳವಲ್ಲಿ ಮಹದೇವಸ್ವಾಮಿ, ಅಪ್ಪಗೆರೆ ತಿಮ್ಮರಾಜು ಜಾನಪದ ಕಾವ್ಯ ಗಾಯನ ಮಾಡುವರು. ಶಿವಮೊಗ್ಗದ ಹೊಸಹಳ್ಳಿ ವೆಂಕಟರಾಮು ತಂಡ ವಯೋಲಿನ್, ವೈ.ಕೆ.ಮುದ್ದುಕೃಷ್ಣ ತಂಡ ಕನ್ನಡ ಡಿಂಡಿಮ ನೃತ್ಯ ನರ್ತಿಸುವರು. ಅ.9ರಂದು ಎಚ್.ಎನ್.ಭಾಸ್ಕರ್ ತಂಡ ಸಂಗೀತ ದರ್ಬಾರ್ ನಡೆಸಿದರೆ, ಬೆಂಗಳೂರಿನ ಹಂಸಲೇಖ ತಂಡ ದೇಸೀ ಸಂಸ್ಕೃತಿ ಹಬ್ಬ ಕಾರ್ಯಕ್ರಮ ನಡೆಸಿಕೊಡುವರು. ಅ.10ಕ್ಕೆ ಅಮೋಘ ವರ್ಷ ಡ್ರಮ್ಸ್ ಕೆಲಕ್ಟಿವ್‌ನಿಂದ ಮಿಶ್ರವಾದ್ಯ ಗಾಯನ, ಶಾಂತಲ ವಟ್ಟಂನಿಂದ ನೃತ್ಯರೂಪಕ, ಶಮಿತಾ ಮಲ್ನಾಡ್ ತಂಡದಿಂದ ಮಧುರ ಮಧುರವೀ ಮಂಜುಳಗಾನ ನಡೆಯಲಿದ್ದು, ಅ.11ಕ್ಕೆ ಪೊಲೀಸ್ ಬ್ಯಾಂಡ್, ಶ್ರೇಯಾ ಪ್ರಹ್ಲಾದ್ ಕುಲಕರ್ಣಿರಿಂದ ನೃತ್ಯ ರೂಪಕ, ಶೇಷಗಿರಿದಾಸ್ ತಂಡದಿಂದ ದಾಸವಾಣಿ ಕೀರ್ತನೆಗಳ ಗಾಯನವಿದೆ. ಅ.12ಕ್ಕೆ ಅದಿತಿ ಪ್ರಹ್ಲಾದ್ ಸುಗಮ ಸಂಗೀತ, ಮುದ್ದುಮೋಹನ್ ತಂಡದ ಹಿಂದೂಸ್ತಾನಿ ಸಂಗೀತ, ಪ್ರವೀಣ್ ಗೋಡ್ಬಿಂಡಿ ಮತ್ತು ಷಡಜ್ ಗೋಡ್ಬಿಂಡಿ ತಂಡದ ಕೊಳಲುವಾದನ ಜುಗಲ್‌ಬಂಧಿ ಕಾರ್ಯಕ್ರಮವಿದೆ. ಅ.13ರಂದು ಪಂಡಿತ್ ಜಯತೀರ್ಥ ಮೇವುಂಡಿ ಹಿಂದೂಸ್ತಾನಿ ಗಾಯನ, ಬಿ.ಜಯಶ್ರೀ ತಂಡದಿಂದ ರಂಗಗೀತೆ, ಶ್ರೀಧರ್‌ಜೈನ್‌ರಿಂದ ನೃತ್ಯರೂಪಕ ನಡೆಯಲಿದೆ.










