ಆಟೋ-ಟ್ಯಾಕ್ಸಿ ಚಾಲಕರಿಗೆ 5,000 ರೂ., ಪಡಿತರ ಚೀಟಿದಾರರಿಗೆ 2 ತಿಂಗಳು ಉಚಿತ ರೇಷನ್: ಸಿಎಂ ಕೇಜ್ರಿವಾಲ್.

119
firstsuddi

ನವದೆಹಲಿ : ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಐದು ಸಾವಿರ ರೂ ಸಹಾಯ ಧನ ಹಾಗೂ ಪಡಿತರ ಚೀಟಿದಾರರಿಗೆ ಎರಡು ತಿಂಗಳು ಉಚಿತ ರೇಷನ್ ನೀಡಲಾಗುವುದು ಎಂದು ಘೋಷಣೆ ಮಾಡಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಒಂದೂವರೆ ಲಕ್ಷ ಆಟೋರಿಕ್ಷಾ ಚಾಲಕರಿಗೆ ಆರ್ಥಿಕ ಸಹಾಯ ಸಿಗಲಿದೆ. ಮುಕ್ತ-ಪಡಿತರ ಯೋಜನೆಯ ಮೂಲಕ ಎಲ್ಲಾ ಪಡಿತರ ಚೀಟಿದಾರರಿಗೆ ಎರಡು ತಿಂಗಳು ಉಚಿತ ಪಡಿತರ ನೀಡುತ್ತೇವೆ. ಇದರಿಂದ ರಾಷ್ಟ್ರ ರಾಜಧಾನಿಯಲ್ಲಿ 72 ಲಕ್ಷ ಪಡಿತರ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ನೆರವಾಗಲಿದೆ ಎಂದು  ತಿಳಿಸಿದರು.

ಇದೇ ವೇಳೆ ಮಾತನಾಡಿದ ಅವರು, ಎರಡು ತಿಂಗಳು ಪಡಿತರ ನೀಡುತ್ತಿದ್ದೇವೆ ಎಂದರೆ ಅಷ್ಟು ದಿನ ಲಾಕ್ ಡೌನ್ ಮಾಡುತ್ತೇವೆ ಎಂದರ್ಥ ಅಲ್ಲ. ಪರಿಸ್ಥಿತಿ ನೋಡಿಕೊಂಡು ಮುಂದಿನ ದಿನಗಳಲ್ಲಿ ಲಾಕ್ ಡೌನ್ ತೆರವು ಮಾಡುತ್ತೇವೆ.  ಆರ್ಥಿಕವಾಗಿ ಸದೃಢರಾಗಿರುವ ಸಶಕ್ತರು ಸಹಾಯಕ್ಕೆ ಮುಂದಾಗಬೇಕು. ಎಂದು ಮನವಿ ಮಾಡಿಕೊಂಡರು.