ಮಂಡ್ಯ : ಪ್ರೇಮಿಗಳಿಬ್ಬರು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಸಾಗರ ನಾರ್ತ್ ಬ್ಲಾಕ್ ಬಳಿಯ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರಿನ ಮೇಟಗಳ್ಳಿ ನಿವಾಸಿಗಳಾದ ನವೀನ್(20) ಮತ್ತು ನಿಸರ್ಗ (19) ಆತ್ಮಹತ್ಯೆ ಶರಣಾದ ಪ್ರೇಮಿಗಳು. ಸಂಬಂಧಿಕರಾಗಿರುವ ನಿಸರ್ಗ ಮತ್ತು ನವೀನ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು ಸಂಬಂಧಿಕರಿಗೆ ವಿಷಯ ತಿಳಿಸಿರಲಿಲ್ಲ.
ನವೆಂಬರ್ 20 ರಂದು ನಿಸರ್ಗಳನ್ನು ಚಾಮರಾಜನಗರ ಸಮೀಪದ ಗ್ರಾಮದ ಯುವಕನಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಡಿಸೆಂಬರ್ 1 ರ ಮಧ್ಯಾಹ್ನ ಮನೆಯಿಂದ ಇಬ್ಬರು ನಾಪತ್ತೆಯಾಗಿದ್ದರು. ಇದೀಗ ಕೆ.ಆರ್.ಸಾಗರ ನಾರ್ತ್ ಬ್ಲಾಕ್ ಬಳಿ ಇಬ್ಬರು ವೇಲ್‌ನಿಂದ ಕೈ ಕಟ್ಟಿಕೊಂಡು ಹಿನ್ನಿರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಈ ಕುರಿತು ಕೆಆರ್‌ಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.










