ಕಾನ್ಪುರ : ಕೊಲೆ ಆರೋಪಿಯನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿಗಳ ತಂಡ ನಡೆಸಿದ ಗುಂಡಿನ ದಾಳಿಗೆ 8 ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ. ಮೃತರನ್ನು ಸಿಒ ದೇವೇಂದ್ರ ಕುಮಾರ್ ಮಿಶ್ರಾ, ಎಸ್ಒ ಮಹೇಶ್ ಯಾದವ್, ಅನೂಪ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ನೆಬುಲಾಲ್, ಕಾನ್ ಸ್ಟೇಬಲ್ ಸುಲ್ತಾನ್ ಸಿಂಗ್, ರಾಹುಲ್, ಜಿತೇಂದ್ರ ಹಾಗೂ ಬಬ್ಲು ಎಂದು ಗುರುತಿಸಲಾಗಿದೆ. ಸುಮಾರು 60 ಪ್ರಕರಣಗಳು ದಾಖಲಾಗಿದ್ದ ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲು ಮೂರು ಪೊಲೀಸ್ ಠಾಣೆಯ ಪೊಲೀಸರ ಗುಂಪು ತೆರಳಿತ್ತು. ಈ ವೇಳೆ ಆರೋಪಿ ವಿಕಾಸ್ ದುಬೆ ಬೆಂಬಲಿಗರು ಸಂಚನ್ನು ರೂಪಿಸಿ ಪೊಲೀಸರ ಮೇಲೆ ಗುಂಡನ್ನು ಹಾರಿಸಿದ್ದು, ಪರಿಣಾಮ 8 ಮಂದಿ ಪೊಲೀಸರು ಮೃತಪಟ್ಟಿದ್ದಾರೆ.










