ಆಸ್ಪತ್ರೆಗೆ ದಾಖಲಾದ ‘ಕೆಜಿಎಫ್’ ತಾತ ಕೃಷ್ಣ ಜಿ. ರಾವ್.

61
firstsuddi

ಕೆಜಿಎಫ್ 1, ಕೆಜಿಎಫ್ 2 ಸಿನಿಮಾದಲ್ಲಿ ತಾತ ಪಾತ್ರ ಮಾಡಿದ್ದ ಕೃಷ್ಣ ಜಿ.ರಾವ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಜಿಎಫ್ ಸಿನಿಮಾದಲ್ಲಿ ಅಂಧ ವೃದ್ಧನ ಪಾತ್ರ ಮಾಡಿ ಫೇಮಸ್ ಆಗಿರುವ ಕೃಷ್ಣ ಜಿ.ರಾವ್ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಚಿತ್ರಗಳ ಯಶಸ್ಸಿನ ಬಳಿಕ ಅವರಿಗೆ ಹಲವು ಆಫರ್ ಗಳು ಬರಲು ಆರಂಭಿಸಿದವು. ಇದೀಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸದ್ಯ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೃಷ್ಣ ಜಿ. ರಾವ್ ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಮತ್ತು ಆಪ್ತರು ಪ್ರಾರ್ಥಿಸುತ್ತಿದ್ದಾರೆ.