ಇಂದಿನ ರಾಜಕೀಯ ಬೆಳವಣಿಗೆಗೆ ಮುಖ್ಯಮಂತ್ರಿಗಳೇ ಕಾರಣ : ಚಲುವರಾಯಸ್ವಾಮಿ…

260

ಮಂಡ್ಯ : ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಚಲುವರಾಯಸ್ವಾಮಿ ಅವರು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಆರೋಪಿಸಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಇಂದಿನ ರಾಜಕೀಯ ಬೆಳವಣಿಗೆಗೆ ಮುಖ್ಯಮಂತ್ರಿಗಳೇ ಕಾರಣ. ಆದರೆ ರೇವಣ್ಣ ಅವರಿಂದ ಈ ರೀತಿ ಬದಲಾವಣೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ರೇವಣ್ಣ ಅವರನ್ನು ಸಚಿವ ಸ್ಥಾನದಿಂದ ಹೊರಗಿಟ್ಟು ಸರ್ಕಾರ ನಡೆಸಬಹುದಿತ್ತು ಎಂದು ಕಿಡಿಕಾರಿದ್ದು, ಮೈತ್ರಿ ಸರ್ಕಾರ ಈ ರೀತಿ ಆಗಲು ರೇವಣ್ಣ ಒಬ್ಬರೇ ಹೊಣೆಯಲ್ಲ. ಅಣ್ಣ-ತಮ್ಮಂದಿರು ಇಬ್ಬರು ಈ ರೀತಿ ಆಗಲು ಕಾರಣರಾಗಿದ್ದಾರೆ. ಕೊನೆಯದಾಗಿ ಸಹಿ ಹಾಕುವವರು ಹಾಗೂ ನಿರ್ಧಾರ ತೆಗೆದುಕೊಳ್ಳುವವರು ಮುಖ್ಯಮಂತ್ರಿಯೇ ತಾನೇ. ಮುಖ್ಯಮಂತ್ರಿಗಳು ತಮ್ಮ ಹೆಸರು ಉಳಿಸಿಕೊಳ್ಳಲು ರೇವಣ್ಣ ಅವರ ಹೆಸರನ್ನು ಡ್ಯಾಮೇಜ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.