ಈ ಕಾಲದಲ್ಲಿ ಗಾಂಧೀಜಿಯವರ ಸರಳತೆ ಅಗತ್ಯ : ಸತೀಶ್ ಮತ್ತಿಕಟ್ಟೆ.

70

ಕೊಟ್ಟಿಗೆಹಾರ : ಅನಗತ್ಯ ದುಂದುವೆಚ್ಚ ಹಾಗೂ ವೈಭವದ ಜೀವನ ಶೈಲಿ ಹೆಚ್ಚಾಗಿರುವ ಈ ಕಾಲದಲ್ಲಿ ಗಾಂಧೀಜಿಯವರು ಪ್ರತಿಪಾದಿಸಿದ ಸರಳ ಜೀವನ ಈ ಕಾಲದ ಅಗತ್ಯವಾಗಿದೆ ಎಂದು ಬಣಕಲ್ ಗ್ರಾ.ಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ ಹೇಳಿದರು

ಬಣಕಲ್ ಗ್ರಾ.ಪಂ.ಯಲ್ಲಿ ನಡೆದ ಗಾಂಧಿಜಯಂತಿ, ವಿಶೇಷ ಗ್ರಾಮ ಸಭೆ ಹಾಗೂ ಶ್ರಮದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸತ್ಯ, ಅಹಿಂಸೆ ಹಾಗೂ ಸರಳತೆಯ ಮಹತ್ವವನ್ನು ತಮ್ಮ ಬದುಕಿನ ಮೂಲಕವೇ ಜಗತ್ತಿಗೆ ಸಾರಿದವರು ಮಹಾತ್ಮ ಗಾಂಧೀಜಿ. ಸರಳವಾಗಿ ಬದುಕಿನ ಸೌಂದರ್ಯ ಸತ್ಯದ ಶಕ್ತಿ ಮತ್ತು ಅಹಿಂಸೆಯ ಸಾಮಥ್ರ್ಯವನ್ನು ನಿರೂಪಿಸಿ ಎಲ್ಲರಿಗೂ ಮಾದರಿಯಾದವರು ಗಾಂಧೀಜಿ ಎಂದರು.
ಪಿಡಿಓ ಕೃಷ್ಣಪ್ಪ ಮಾತನಾಡಿ ಗಾಂಧೀಜಿ ಅವರ ಬದುಕು, ಚಿಂತನೆಗಳು ಮಕ್ಕಳು ಹಾಗೂ ಯುವ ಸಮುದಾಯವನ್ನು ತಲುಪಬೇಕಿದೆ ಗ್ರಾಮ ಸ್ವರಾಜ್ಯದ ಕಲ್ಪನೆ ಹಾಗೂ ಸ್ವದೇಶಿ ಪ್ರೇಮವನ್ನು ಎಲ್ಲರಲ್ಲೂ ತುಂಬ ಬೇಕಿದೆ ಎಂದರು.

ಸಭಾ ಕಾರ್ಯಕ್ರಮದ ನಂತರ ಬಣಕಲ್‍ನ ಗ್ರಾ.ಪಂ ಸುತ್ತಮುತ್ತ ಶ್ರಮದಾನ ಮಾಡಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ದೆ ನಡೆಸಿ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಸುರೇಶ್, ದಿಲ್ದಾರ್ ಬೇಗಂ, ಸುರೇಶ್ ಬಿ.ಕೆ, ಬಾಲಕರ ವಸತಿನಿಲಯದ ವಾರ್ಡನ್ ರಾಜೇಶ್, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾ.ಪಂ ಸಿಬ್ಬಂದಿಗಳು ಇದ್ದರು.

ಬಣಕಲ್ , ಕೊಟ್ಟಿಗೆಹಾರ ಸುತ್ತಮುತ್ತ ಗಾಂಧಿ ಜಯಂತಿ ಆಚರಣೆ :
ಬಣಕಲ್ ಕೊಟ್ಟಿಗೆಹಾರ ಬಾಳೂರು ಸುತ್ತಮುತ್ತ ಗಾಂಧಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಬಣಕಲ್‍ನ ವಿದ್ಯಾಭಾರತಿ ಶಾಲೆ, ಬಣಕಲ್ ಪ್ರೌಡಶಾಲೆ, ಸಹಿಪ್ರಾ ಶಾಲೆ, ಬಣಕಲ್ ನಾಡಕಚೇರಿ, ಕೊಟ್ಟಿಗೆಹಾರ ಗ್ರಾ.ಪಂ ಏಕಲವ್ಯ ಶಾಲೆ, ಸರ್ಕಾರಿ ಪ್ರೌಡಶಾಲೆ, ಬಾಳೂರು, ನಿಡುವಾಳೆ, ಜಾವಳಿ, ಬಿ ಹೊಸಳ್ಳಿ ಗ್ರಾ.ಪಂ ಸೇರಿದಂತೆ ವಿವಿದೆಡೆ ಗಾಂಧಿಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.