ಎಸ್‍ಡಿಪಿಐ, ನಿಷೇಧಿತ ಪಿಎಫ್‍ಐ ಕಾರ್ಯಕರ್ತರಿಗೆ ಷರತ್ತುಬದ್ಧ ಜಾಮೀನು…

63
firstsuddi

ಬೆಳಗಾವಿ : ಎಸ್‍ಡಿಪಿಐ ಬೆಳಗಾವಿ ಜಿಲ್ಲಾಧ್ಯಕ್ಷ ಮತ್ತು ನಿಷೇಧಿತ ಪಿಎಫ್‍ಐನ ಆರು ಮಂದಿ ಕಾರ್ಯಕರ್ತರಿಗೆ ಬೆಳಗಾವಿ ಡಿಸಿಪಿ ರವೀಂದ್ರ ಗಡಾದಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.

ಅಸಾದ್ ಖಾನ್ ಸೊಸೈಟಿ ನಿವಾಸಿ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಬೀದ್ ಖಾನ್ ಕಡೋಲಿ, ಆಜಂ ನಗರದ ನಿವಾಸಿ ಪಿಎಫ್ ಐ ಮಾಜಿ ಜಿಲ್ಲಾಧ್ಯಕ್ಷ ಝಕೀವುಲ್ಲಾ ಫೈಜಿ, ಶಿವಾಜಿ ನಗರದ ನಿವಾಸಿ ಸಲಾವುದ್ದೀನ್ ಖಿಲೆವಾಲೆ, ಅಸಾದ್ ಖಾನ್ ನಿವಾಸಿ ಬದ್ರುದ್ದೀನ್ ಪಟೇಲ್, ಅಮನ್ ನಗರ ನಿವಾಸಿ ಸಮೀವುಲ್ಲಾ ಪೀರ್ಜಾದೆ, ಬಾಕ್ಸೈಟ್ ರೋಡ್ ನಿವಾಸಿ ಜಹೀರ್ ಘೀವಾಲೆ ಹಾಗೂ ವಿದ್ಯಾಗಿರಿ ನಿವಾಸಿ ರೆಹಾನ್ ಅಜೀಜ್ ಗೆ ಜಾಮೀನು ಸಿಕ್ಕಿದೆ.

ಪ್ರಚೋದನೆ ಮಾಡದಂತೆ ಷರತ್ತು ವಿಧಿಸಿರುವ ಡಿಸಿಪಿ, ತಲಾ ಒಬ್ಬರಿಗೆ 50 ಸಾವಿರ ಬಾಂಡ್ ಪಡೆದು ಜಾಮೀನು ಮಂಜೂರು ಮಾಡಿದ್ದಾರೆ.

ಕಳೆದ ಸೆ. 27ರಂದು ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ದಾಳಿ ನಡೆಸಿ ಸಿಆರ್‌ಪಿಸಿ 110 ಸೆಕ್ಷನ್ ಅಡಿ ಈ 7 ಜನರನ್ನು ಬಂಧಿಸಿ ಜೈಲಿಗಟ್ಟಿದ್ದರು.