ಐಎಎಸ್, ಐಪಿಎಸ್ ಮೂಲಕ ಅಧಿಕಾರ ನಡೆಸುತ್ತೆ ಎಂದು ಮೆದುಳಿಗೆ ಪೊರೆ ಬಂದಿರುವವರು ಹೇಳುವ ಮಾತು : ಕೆ.ಎಸ್.ಈಶ್ವರಪ್ಪ.

62
firstsuddi

ಬಾಗಲಕೋಟೆ : ಐಎಎಸ್, ಐಪಿಎಸ್ ಮೂಲಕ ಅಧಿಕಾರ ನಡೆಸುತ್ತೆ ಎಂದು ಮೆದುಳಿಗೆ ಪೊರೆ ಬಂದಿರುವವರು ಹೇಳುವ ಮಾತು ಎಂದು ಸಚಿವ ಕೆ.ಎಸ್ ಈಶ್ವರಪ್ಪನವರು ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಆರ್‍ಎಸ್‍ಎಸ್ ಬಗ್ಗೆ ನೆಹರು, ಇಂದಿರಾಗಾಂಧಿ ಮಾತಾಡಿದಾಗ ಅವರನ್ನೇ ಬಿಟ್ಟಿಲ್ಲ. ಇನ್ನು ಇವರ್ಯಾರ್ರಿ ನಮ್ಮ ಲೆಕ್ಕಕ್ಕೆ. ಆರ್‍ಎಸ್‍ಎಸ್ ದೇಶದ ಯುವಕರಿಗೆ ರಾಷ್ಟ್ರಭಕ್ತಿ ನಿರ್ಮಾಣ ಮಾಡುವ ದೊಡ್ಡ ಶಕ್ತಿ. ಆರ್‍ಎಸ್‍ಎಸ್ ಇಲ್ಲಾ ಅಂದಿದ್ರೆ ಈ ದೇಶ ಪಾಕಿಸ್ತಾನ ಆಗಿ ಹೋಗಿರ್ತಿತ್ತು ಎಂದು ಕಿಡಿಕಾರಿದರು.

ಕಾಂಗ್ರೆಸ್ ನಿಂದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗು ಜೆಡಿಎಸ್ನಿಂದ ಕುಮಾರಸ್ವಾಮಿ ಇಬ್ಬರೂ ಕೂಡ ಮುಸ್ಲಿಂ ಸಮುದಾಯದ ಮೇಲೆ ಕಣ್ಣಿಟ್ಟು ಆರ್‍ಎಸ್‍ಎಸ್ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಆರ್‍ಎಸ್‍ಎಸ್ ಇದೆ. ಈ ದೇಶದ ರಾಷ್ಟ್ರಪತಿ, ಪ್ರಧಾನಮಂತ್ರಿ ಆರ್‍ಎಸ್‍ಎಸ್ ಸಂಸ್ಥೆಯಿಂದ ಬಂದಿದ್ದು. ರಾಜ್ಯಪಾಲರು ಆರ್‍ಎಸ್‍ಎಸ್, ದೇಶದ ಅನೇಕ ಮುಖ್ಯಮಂತ್ರಿಗಳು ಆರ್ಎಸ್ಎಸ್ ನಿಂದಲೇ ಬಂದಿದ್ದಾರೆ. ಸಂಘ ಏನೂ ಮಾಡಲ್ಲ. ಆದರೆ ಸಂಘದಿಂದ ತರಬೇತಿ ಪಡೆದು, ಶಿಕ್ಷಣ ಪಡೆದು ಏನು ಬೇಕಾದರೂ ಮಾಡುತ್ತಾರೆ ಎಂದು ಹೇಳಿದರು.