ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಆಸ್ಪತ್ರೆಗೆ ದಾಖಲು…

88
firstsuddi

ಲಂಡನ್ : ಇಂಡಿಯನ್ ಪ್ರೀಮಿಯರ್ ಲೀಗ್ ನ (ಐಪಿಎಲ್) ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದ ಎರಡು ವಾರಗಳಲ್ಲಿ ಎರಡು ಬಾರಿ ಕೊರೊನಾ ಸೋಂಕಿಗೆ ತುತ್ತಾಗಿರುವ ಲಲಿತ್ ಮೋದಿಗೆ ನ್ಯುಮೋನಿಯಾ ಕೂಡ ಕಾಣಿಸಿಕೊಂಡಿದೆ. ಹೀಗಾಗಿ ಲಲಿತ್ ಮೋದಿ ದಿನದ 24 ಗಂಟೆಯೂ ಕೃತಕ ಆಮ್ಲಜನಕದ ಸಹಾಯದಿಂದ ಉಸಿರಾಡುವಂತಾಗಿದೆ.

ಅನಾರೋಗ್ಯದ ಬಗ್ಗೆ ಸ್ವತಃ ಲಲಿತ್ ಮೋದಿ ಇನ್ ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಎರಡು ವಾರಗಳಲ್ಲಿ ಎರಡು ಬಾರಿ ಕೋವಿಡ್ ಸೋಂಕಿಗೆ ಒಳಗಾಗಿದ್ದೇನೆ. ಇದರ ಜೊತೆ, ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನನ್ನು ಏರ್ ಆಂಬುಲೆನ್ಸ್ ಮೂಲಕ ಕರೆತರಲಾಗಿತ್ತು. ನನ್ನ ಆರೋಗ್ಯದ ಕುರಿತಾಗಿ ಕಾಳಜಿ ವಹಿಸಿದ ಇಬ್ಬರು ವೈದ್ಯರು ಮತ್ತು ಮಗನಿಗೆ ಧನ್ಯವಾದ ತಿಳಿಸಿ ಪೋಸ್ಟ್ ಮಾಡಿದ್ದಾರೆ.

ಕಳೆದ ವರ್ಷ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರೊಂದಿಗಿನ ಸಂಬಂಧವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಲಲಿತ್ ಮೋದಿ ಸುದ್ದಿಯಾಗಿದ್ದರು. ಆದರೆ ನಟಿ ಸುಶ್ಮಿತಾ ಸೇನ್ ಮಾತ್ರ ಈ ವದಂತಿಯನ್ನು ನಿರಾಕರಿಸಿದ್ದಲ್ಲದೆ, ಇದೆಲ್ಲವು ಸುಳ್ಳು ಎಂದು ಹೇಳಿಕೊಂಡಿದ್ದರು.