ಮೈಸೂರು : ಒಂದೇ ತಿಂಗಳಿನಲ್ಲಿ ನಂಜನಗೂಡಿನ ನಂಜುಂಡೇಶ್ವರ ಕೋಟ್ಯಾಧೀಶರನಾಗಿದ್ದಾನೆ. ಕೊರೊನಾ ಹಾಗೂ ಲಾಕ್ ಡೌನ್ ನಡುವೆಯೂ ನಂಜುಂಡೇಶ್ವರ ದೇವಾಲಯದಲ್ಲಿ 1,29,73,194 ರೂಪಾಯಿ ಕಾಣಿಕೆ ಹಣ ಸಂಗ್ರಹವಾಗಿದೆ. ಅಲ್ಲದೇ 50ಗ್ರಾಂ ಚಿನ್ನ, 8 ಕೆಜಿ 200 ಗ್ರಾಂ ಬೆಳ್ಳಿ, 12 ವಿದೇಶಿ ಕರೆನ್ಸಿಗಳು ಹುಂಡಿಯಲ್ಲಿ ಸಂಗ್ರಹವಾಗಿದೆ.
ನಂಜನಗೂಡಿನ ದೇವಸ್ಥಾನದ ಸಿಬ್ಬಂದಿ ಹಾಗೂ ಕಾವೇರಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸಿಬ್ಬಂದಿ ದೇವಸ್ಥಾನದ ಹುಂಡಿಯಲ್ಲಿರುವ ಹಣ ಹಾಗೂ ಚಿನ್ನಾಭರಣ ಎಣಿಕೆ ಮಾಡಿದ್ದಾರೆ. ಲಾಕ್ ಡೌನ್ ತೆರವು ಬಳಿಕ ನಂಜುಂಡೇಶ್ವರನ ದರ್ಶನ ಪಡೆಯಲು ಭಕ್ತಾದಿಗಳ ಸಂಖ್ಯೆ ದಿನೇ ದಿನೇ ಏರುತ್ತಿರುವುದರಿಂದ ಹುಂಡಿಗೆ ಕಾಣಿಕೆ ಹೆಚ್ಚಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.










