ಎರಡು ಡೋಸ್ ಪಡೆದವರಿಗೆ ಓಮಿಕ್ರಾನ್ ತೀವ್ರತೆ ಇರಲ್ಲ, ಆತಂಕ ಬೇಡ : ಸಚಿವ ಸುಧಾಕರ್.

75
firstsuddi

ಬೆಂಗಳೂರು : ಎರಡು ಡೋಸ್ ಪಡೆದವರಿಗೆ ಓಮಿಕ್ರಾನ್ ತೀವ್ರತೆ ಇರೋದಿಲ್ಲ. ಕೇಂದ್ರದಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ. ಡೆಲ್ಟಾವನ್ನು ನಾವು ಎದುರಿಸಿದ್ದೇವೆ. ಓಮಿಕ್ರಾನ್ ಹರಡುವಿಕೆ ಇದೆ. ಆದ್ರೆ ತೀವ್ರತೆ ಇಲ್ಲ. ಆತಂಕ ಪಡೋ ಅಗತ್ಯ ಇಲ್ಲ ಎಂದು ಸಚಿವ ಕೆ.ಸುಧಾಕರ್ ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 5 ಜನರ ರಿಪೋರ್ಟ್ ಇನ್ನೂ ಬಂದಿಲ್ಲ. ರಿಪೋರ್ಟ್ ಬಂದ ಕೂಡಲೇ ಮಾಹಿತಿ ಕೊಡ್ತೀವಿ. ನಮ್ಮ ರಾಜ್ಯದಲ್ಲಿ ಓಮಿಕ್ರಾನ್ ಬಂದ ಸಂಪರ್ಕದಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಂಪರ್ಕಿತರು ಎರಡು ಡೋಸ್ ತೆಗೆದುಕೊಂಡಿದ್ದಾರೆ ಎಂದರು.

ಜನವರಿಯಲ್ಲಿ ಮೂರನೇ ಅಲೆ ಬರುತ್ತೆ ಅನ್ನೋ ತಜ್ಞರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ರೀತಿಯ ಸಾಂಕ್ರಾಮಿಕ ರೋಗ ಬಂದ್ರೆ ಮೊದಲ ಅಲೆ ಮತ್ತು ಎರಡನೇ ಅಲೆ ತೀವ್ರವಾಗಿ ಇರುತ್ತೆ. ಹಿಂದೆ ಬಂದ ಅನೇಕ ಸಾಂಕ್ರಾಮಿಕ ರೋಗಗಳಲ್ಲಿ ಇದು ಸಾಬೀತಾಗಿದೆ. ಸಾಂಕ್ರಾಮಿಕ ರೋಗಗಳಲ್ಲಿ ಎರಡನೇ ಅಲೆ ದೊಡ್ಡ ಪ್ರಮಾಣದಲ್ಲಿ ಇರುತ್ತೆ. ಮೂರನೇ ಅಲೆ ಮತ್ತು 4 ನೇ ಅಲೆ ತೀವ್ರತೆ ಸ್ವಲ್ಪ ಕಡಿಮೆ ಇರುತ್ತೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಎಲ್ಲರೂ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಮಕ್ಕಳಲ್ಲಿ ಸೋಂಕು ಹರಡುತ್ತಿರೋ ವಿಚಾರವಾಗಿ ಮಾತನಾಡಿದ ಅವರು, ಡೆಲ್ಟಾ, ಡೆಲ್ಟಾ ಪ್ಲಸ್ ಬಂದಾಗಲೂ ಮಕ್ಕಳಿಗೆ ಯಾವುದೇ ದೊಡ್ಡ ಮಟ್ಟದಲ್ಲಿ ಸಮಸ್ಯೆ ಆಗಿಲ್ಲ. ಓಮಿಕ್ರಾನ್ ಕೂಡ ಮಕ್ಕಳಿಗೆ ಯಾವುದೇ ತೀವ್ರ ಪರಿಣಾಮ ಬಿರುವುದಿಲ್ಲ. ಹೀಗಾಗಿ ಆತಂಕ ಪಡುವ ಯಾವುದೇ ಅವಶ್ಯಕತೆ ಇಲ್ಲ ಎಂದರು.