ಕಳಸ : ಇಂದು ಮುಂದುವರೆದ ಬಿರುಸಿನ ಮಳೆ…

195
firstsuddi

ಕಳಸ : ಕಳಸ ಹೋಬಳಿಯಾಧ್ಯಂತ ಇಂದು ಮಳೆಯ ಆರ್ಭಟ ಸ್ವಲ್ಪ ಮಟ್ಟಿಗೆ ತಗ್ಗಿದೆಯಾದರೂ ಮದ್ಯಾಹ್ನದ ಮೇಲೆ ಬಿರುಸಿನ ಮಳೆಯಾಗಿದೆ.
ಭಾನುವಾರ ಎಡೆ ಬಿಡದೆ ಸುರಿದ ಮಳೆ ರಾತ್ರಿ ವೇಳೆಯಲ್ಲಿ ಮಳೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ ಗಾಳಿಯ ಅಬ್ಬರ ಹೆಚ್ಚಾಗಿತ್ತು. ಮದ್ಯಾಹ್ನದವರೆಗೆ ಮಳೆಯ ಪ್ರಮಾಣ ಕಡಿಮೆಯಾಗಿ ಮದ್ಯಾಹ್ನದ ನಂತರ ಹೆಚ್ಚಿನ ಮಳೆ ಸುರಿದಿದೆ.
ಭಾನುವಾರ ಭದ್ರಾ ನದಿಯಲ್ಲಿ ನೀರಿನ ಏರಿಕೆ ಕಂಡು ಹೆಬ್ಬಾಳೆ ಸೇತುವೆ ಮುಳುಗಡೆಗೊಂಡು ಕಳಸ-ಹೊರನಾಡು ಸಂಚಾರ ಕಡಿತಗೊಂಡಿತ್ತು. ಆದರೆ ರಾತ್ರಿ ಮಳೆ ಕಡಿಮೆಯಾದ ಪರಿಣಾಮ ಸೋಮವಾರ ನೀರಿನ ಏರಿಕೆ ಕಡಿಮೆಯಾಗಿ ಸಂಚಾರ ಸುಗಮವಾಯಿತು. ಕಳಸ-ಕುದುರೆಮುಖ-ಕಾರ್ಕಳ ರಸ್ತೆಯ ಎಸ್. ಕೆ. ಬಾರ್ಡರ್ ಮತ್ತು ಮಾಳ ಮದ್ಯೆ ಹೆದ್ದಾರಿಗೆ ಭಾನುವಾರ ಗುಡ್ಡ ಜರಿದು ಬಿದ್ದು ರಸ್ತೆ ಕಡಿತಗೊಂಡಿತ್ತು. ಸಂಜೆಯಾಗುತ್ತಿದ್ದಂತೆ ತೆರವು ಮಾಡಲಾಗಿತ್ತು. ಆದರೆ ರಾತ್ರಿ ಮತ್ತಷ್ಟೇ ಪ್ರಮಾಣದಲ್ಲಿ ಗುಡ್ಡ ಜರಿದು ಬಿದ್ದ ಪರಿಣಾಮ ಇಂದು ಪೂರ್ತಿ ಕಳಸ-ಕಾರ್ಕಳ-ಮಂಗಳೂರು ಸಂಪೂರ್ಣ ಕಡಿತಗೊಂಡಿತ್ತು.
ಎಡೆ ಬಿಡದೆ ಬೀಸಿದ ಗಾಳಿಯ ಪರಿಣಾಮ ಹೋಬಳಿಯಾಧ್ಯಂತ ನೂರಾರು ಅಡಕೆ ಮರಗಳು ದರೆಗುರುಳಿ ಬಿದ್ದಿದ್ದು, ಕೃಷಿಕರು ಸಾಕಷ್ಟು ನಷ್ಟ ಅನುಭವಿಸುವಂತಾಯಿತು.