ಕಳಸ : ದೇವರಲ್ಲಿ ಹೇಗೆ ರಾಜದ್ವೇಷ ಇಲ್ಲವೊ ಅದರ ಸ್ವರೂಪವೇ ಮಕ್ಕಳಗಾಗಿರುತ್ತಾರೆ : ಡಾ||ಜಿ.ಭೀಮೇಶ್ವರ ಜೋಷಿ.

122
firstsuddi

ಕಳಸ : ನಾವು ಯಾವ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತೇವೆಯೋ ಆ ಕ್ಷೇತ್ರದ ಜವಬ್ದಾರಿಯನ್ನು ನಿರ್ವಹಿಸುವಂತವರ ಅಂತರಂಗ ಮಕ್ಕಳ ಶುದ್ಧವಾದ ಮನಸ್ಸಿನ ರೀತಿ ಇದ್ದರೆ ಅದು ಪರಿಪೂರ್ಣವಾದ ಬದುಕು ಎಂದು ಹೊರನಾಡು ಕ್ಷೇತ್ರದ ಧರ್ಮಕರ್ತ ಡಾ||ಜಿ.ಭೀಮೇಶ್ವರ ಜೋಷಿ ಹೇಳಿದರು.
ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಇಂದು ನಡೆದ ಪಟ್ಟಾಭಿಷೇಕೋತ್ಸವ, ಜೀವ-ಭಾವ ಕಾರ್ಯಕ್ರಮದ ಅಂಗವಾಗಿ ಶ್ರೀಮಾತಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇವರಲ್ಲಿ ಹೇಗೆ ರಾಜದ್ವೇಷ ಇಲ್ಲವೊ ಅದರ ಸ್ವರೂಪವೇ ಮಕ್ಕಳಗಾಗಿರುತ್ತಾರೆ. ಮಕ್ಕಳಲ್ಲಿ ಇರುವ ಪರಿಶುದ್ಧವಾದ ಸ್ವರೂಪ ನಮ್ಮ ಜೀವನದಲ್ಲಿ ಕೊನೆಯವರೆಗೂ ಅಳವಡಿಸಿಕೊಳ್ಳಬೇಕು.ದೇಶದುದಕ್ಕೂ ಪ್ರವಾಸ ಮಾಡಿದ ಸಂದರ್ಭದಲ್ಲಿ ಮನುಷ್ಯ ಜೀವಿಯು ಅನುಭವಿಸುತ್ತಿರುವ ಕಷ್ಟಗಳ ಸನ್ನಿವೇಶಗಳನ್ನು ನೋಡಿ ಕಷ್ಟದ ಜೀವಿಗಳಿಗೆ ಭಾವನೆಗಳನ್ನು ತುಂಬುವಂತ ಕಾರ್ಯಕ್ರಮವನ್ನು ಮಾಡುವ ಯೊಚನೆಯ ಫಲವಾಗಿ ಪರರ ಹಿತವಾಗಿ ಸ್ಪಂದಿಸುವ ಸಂಸ್ಥೆಗಳನ್ನು ಗುರುತಿಸಿ ಅದಕ್ಕೆ ಜೀವ-ಭಾವ ಎನ್ನುವ ಕಾರ್ಯಕ್ರಮದಡಿಯಲ್ಲಿ ಪ್ರಶಸ್ತಿ ಪ್ರದಾನ ಮತ್ತು ಒಂದು ಲಕ್ಷ ರೂ ನೀಡಲಾಗುತ್ತಿದೆ.
ನಮ್ಮ ಹಿರಿಯರು ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಹಾಕಿದ ಭದ್ರ ಅಡಿಪಾಯದ ನೆಲೆಯಲ್ಲಿ ಈ ಕ್ಷೇತ್ರ ವಿಸ್ತಾರವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಹೆಚ್ಚುವರಿ ಅಡಿಷನಲ್ ಅಡ್ವಕೇಟ್ ಜನರಲ್ ಅರುಣ್ ಶ್ಯಾಮ್ ಮಾತನಾಡಿ ಸಮಾಜದ ಅಂದಕಾರವವನ್ನು ಅನ್ನಪೂರ್ಣೇಶ್ವರಿಯು ಹೋಗಲಾಡಿಸಿದರೆ, ಮಕ್ಕಳ ಅಂದಕಾರವನ್ನು ಶಾರದಾದೇವಿ ಅಂಧರ ವಿಕಾಸ ಕೇಂದ್ರ ಹೋಗಲಾಡಿಸುತ್ತಿದೆ.ಹೊರನಾಡು ಕ್ಷೇತ್ರ ನಂಬಿದ ಭಕ್ತರಿಗೆ ಜೀವ ಕೊಡುವ ಕೆಲಸವನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಕ್ಷೇತ್ರವು ಅಂಧರ ಸಂಸ್ಥೆಗೆ ಪ್ರಶಸ್ತಿಯನ್ನು ನೀಡುತ್ತಿರುವುದು ಅಭಿನಂದಾರ್ಹವಾಗಿದೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿವಮೊಗ್ಗ ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಭಟ್, ಕ್ಷೇತ್ರದ ಕಾರ್ಯಚಟುವಟಿಕೆಯ ಮದ್ಯೆಯೂ ನಮಗೆ ನೀಡಿದ ಪ್ರಶಸ್ತಿ ಪ್ರದಾನದಿಂದ ನಮಗೆ ಇನ್ನಷ್ಟು ಕೆಲಸ ಮಾಡಲು ಉತ್ತೇಜನ ನೀಡಿದಂತಾಗಿದೆ.ನಮ್ಮ ಸಂಸ್ಥೆಯು ಅಂಧ ವಿದ್ಯಾರ್ಥಿಗಳಿಗೆ ಉಚಿತ ಆಶ್ರಯದೊಡನೆ ವಿಧ್ಯೆ,ಬೋಜನ,ವೈದ್ಯಕೀಯ ಸೌಲಭ್ಯ ನೀಡುತ್ತಿದೆ.ಪಠ್ಯದ ಜೊತೆ ನೃತ್ಯ,ಸಂಗೀತ,ವಾಧ್ಯ ನುಡಿಸುವಿಕೆ, ಯಕ್ಷಗಾನ, ವ್ಯಾಯಮ, ಕ್ರೀಡೆ, ಆಧ್ಯಾತ್ಮಿಕ ಚಟುವಟಿಕೆ, ಸ್ವಾವಲಂಬಿ ಜೀವನದ ತರಭೇತಿಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಂಚಿತವಾಗಿ ಧರ್ಮಕರ್ತ ಡಾ|ಜಿ.ಬೀಮೇಶ್ವರ ಜೋಷಿಯವರ ಪಟ್ಟಾಭಿಷೇಕವಾಗಿ 30 ವರ್ಷ ತುಂಬಿದ ದಿನದ ಅಂಗವಾಗಿ ದೇವಿಗೆ ಅಭಿಷೇಕ, ಪೂಜೆ, ನವಗ್ರಹ ಹೋಮಗಳು ನಡೆಯಿತು.
ಈ ಸಂದರ್ಭದಲ್ಲಿ ಶಾರದಾದೇವಿ ಅಂಧರ ವಿಕಾಸ ಕೇಂದ್ರ ಕಾರ್ಯದರ್ಶಿ ಕೃಷ್ಣ ಪ್ರಸಾದ್, ಹೊರನಾಡಿನ ರಾಜಲಕ್ಷ್ಮೀ ಜೋಷಿ, ರಾಮನಾರಾಯಣ ಜೋಷಿ, ರಾಜಗೋಪಾಲ ಜೋಷಿ, ಗಿರಿಜಾ ಶಂಕರ ಜೋಷಿ, ಭವಾನಿ ಶಂಕರ್ ಜೋಷಿ ಇದ್ದರು.