ಕಳಸ : ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ವಿದ್ಯುತ್ ಕೊರತೆ, ಮೊಬೈಲ್ ನೆಟ್ ವರ್ಕ್ ಸಮಸ್ಯೆ ಇದೆ ಆದ್ದರಿಂದ ಗ್ರಾಮೀಣ ಪ್ರದೇಶದ ಬಡಾ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಮಕ್ಕಳ ಆನ್ ಲೈನ್ ಶಿಕ್ಷಣಕ್ಕೆ ನನ್ನ ವಿರೋಧವಿದೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಕಳಸ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ನಡೆದ ಟ್ಯಾಬ್ ವಿತರಣೆ, ಸ್ಮಾರ್ಟ್‍ಕ್ಲಾಸ್ ರೂಂ ಉದ್ಘಾಟನೆ, ರೋಟರಿ ಕ್ಲಬ್ ಮತ್ತು ಕಾಗ್ನಿಜೆಂಟ್ ಕಂಪನಿ ವತಿಯಿಂದ ಕಂಪ್ಯೂಟರ್ ಕೊಡುಗೆ ಹಾಗೂ ಕಾಲೇಜಿನ ಕಾಂಕ್ರೇಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಶಾಲಾ ಕಾಲೇಜುಗಳನ್ನು ತೆರೆದು ತರಗತಿ ನಡೆಸಲು ನಾನು ಸಚಿವರಿಗೆ ಒತ್ತಾಯಿಸಿದ್ದೇನೆ. ಅನಿವಾರ್ಯ ಕಾರಣ ಆನ್ ಲೈನ್ ಕ್ಲಾಸ್ ಗೆ ಮೊರೆ ಹೋಗಬೇಕಾದ ಸಂದರ್ಭ ಎದುರಾಗಿರುವುದರಿಂದ ಬಡ ವಿದ್ಯಾಥಿಗಳಿಗೆ ಅನುಕೂಲವಾಗಲು ಸರ್ಕಾರ ಟ್ಯಾಬ್ ವಿತರಣೆ ಮಾಡಿದೆ.ವಿದ್ಯಾರ್ಥಿಗಳು ಸೋಮಾರಿಗಳಾಗದೆ ಟ್ಯಾಬ್ ನ್ನು ಶಿಕ್ಷಣಕ್ಕೆ ಒಳ್ಳೆಯ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದ ಅವರು ಕಾಲೇಜಿನ ಅಬಿವೃದ್ಧಿಗಾಗಿ ನಾನು ಸದಾ ಸಿದ್ದನಿದ್ದೇನೆ. ಇಲ್ಲಿಯ ಸುಸಜ್ಜಿತ ಕ್ರೀಡಾಂಗಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆ ಬೇಡಿಕೆಯನ್ನು ಖಂಡಿತಾ ಈಡೇರಿಸುತ್ತೇನೆ ಎಂದು ಹೇಳಿದರು.
ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ ಮಾತನಾಡಿ ಮನಸ್ಸಿನಷ್ಟೇ ವೇಗವಾಗಿ ಓಡುತ್ತಿರುವ ತಂತ್ರಜ್ಞಾನವನ್ನು ಮಕ್ಕಳ ಕಲಿಕೆಗೆ ಸರ್ಕಾರ ಉಚಿತವಾಗಿ ನೀಡುತ್ತದೆ.ಕೊರೋನದಿಂದ ಪಠ್ಯ ಚಟುವಟಿಕೆಗಳು ಸ್ಥಗಿತಗೊಂಡಿತು.ಅದಕ್ಕೆ ಈ ತಂತ್ರಜ್ಞಾನಗಳು ನೆರವು ನೀಡಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರೋಟರಿ ಸಂಸ್ಥೆಯಿಂದ 10 ಕಂಪ್ಯೂಟರ್ ಗಳನ್ನು ಕಾಲೇಜಿಗೆ ನೀಡಲಾಯಿತು.ಪ್ರಥಮ ವರ್ಷದ 86 ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಲಾಯಿತು.ಕಾಲೇಜಿನ ಹಲವು ವರ್ಷಗಳ ಬೇಡಿಕೆಯಾಗಿದ್ದ ಕಾಲೇಜಿಗೆ ಹೋಗುವ 213 ಮೀ ಉದ್ದದ 10 ಲಕ್ಷ ವೆಚ್ಚದ ಕಾಂಕ್ರೇಟ್ ರಸ್ತೆಯ ಉದ್ಘಾನೆಯನ್ನು ಈ ಸಂದರ್ಭದಲ್ಲಿ ನೆರವೇರಿಸಲಯಿತು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಪ್ರಸಿದ್ಧ ಜೈನ್,ರೋಟರಿ ಅಧ್ಯಕ್ಷ ಸಿ.ಕೆ.ಮೂರ್ತಿ,ನಿಖಟಪೂರ್ವ ಅಧ್ಯಕ್ಷ ರಿತೇಶ್,ಕಾಲೇಜು ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ,ಬಿಜೆಪಿ ಕಳಸ ಘಟಕದ ಅಧ್ಯಕ್ಷ ನಾಗಭೂಷನ್,ಗ್ರಾಮ ಪಂಚಾಯಿತಿ ಸದಸ್ಯ ರಂಗನಾಥ್,ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಮೋಹನ್,ಕಾರ್ತಿಕ್ ಶಾಸ್ತ್ರಿ,ಪ್ರದೀಪ,ಸುರೇಶ್,ಸುಧಾಕರ್,ದೀಕ್ಷಿತ್ ಗೌಡ,ಬಾಲಕೃಷ್ಣ ಪ್ರಭು, ಇದ್ದರು.










