ಕಾಂಗ್ರೆಸ್ ಪಕ್ಷದಿಂದ ಕಾರ್ಯಕರ್ತರನ್ನು ಕೈ ಬಿಟ್ಟರೂ ಅವರು ಸ್ವಾಭಿಮಾನ ಬಿಡಲಿಲ್ಲ : ಸುಮಲತಾ ಅಂಬರೀಶ್…

187
firstsuddi

ಮಂಡ್ಯ : ಲೋಕಸಭಾ ಚುನಾವಣಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು “ಸ್ವಾಭಿಮಾನಿ ಸಮ್ಮಿಲನ” ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದು, ನಾಲ್ಕು ವಾರದ ನಂತರ ನಾನು ಚುನಾವಣಾ ಪ್ರಚಾರದಲ್ಲಿ ಏನನ್ನೂ ಕಲಿತೆ, ಏನನ್ನೂ ನೋಡಿದ್ದೇನೆ ಎಂದು ನಿಮ್ಮ ಬಳಿ ಹಂಚಿಕೊಳ್ಳುತ್ತೇನೆ. ಪ್ರಚಾರದ ವೇಳೆ ನೀವು ಅಂಬರೀಶ್ ಅವರ ಮೇಲೆ ಇಟ್ಟಿದ್ದ ಅಭಿಮಾನ, ಪ್ರೀತಿಯನ್ನು ಇಟ್ಟುಕೊಂಡಿರುವುದನ್ನು ನೋಡಿದರೆ ಅಂಬರೀಶ್ ಅವರು ನನ್ನನ್ನು ಬಿಟ್ಟು ಎಲ್ಲೂ ಹೋಗಿಲ್ಲ ನಿಮ್ಮಲ್ಲಿಯೇ ಇದ್ದಾರೆ ಎಂಬ ಭಾವನೆ ಮೂಡಿಸಿದ್ದೀರ. ನಾನು ಚುನಾವಣೆಗೆ ಸ್ಪರ್ಧಿಸುವುದಕ್ಕೂ ಮೊದಲು ನಾನು ಯೋಚನೆ ಮಾಡಿ ನಿರ್ಧಾರಕ್ಕೆ ಬಂದಿದ್ದೇನೆ. ಚುನಾವಣೆಗೆ ಸ್ಪರ್ಧಿಸಿದಾಗ ಕೆಲವು ಸ್ನೇಹ ಸಂಬಂಧಗಳು ಹಾಳಾಗುತ್ತೆ ಎಂದು ಗೊತ್ತಿತ್ತು. ನಾನು ಚುನಾವಣೆಗೆ ಬರುವಾಗ ಒಂಟಿಯಾಗಿ ಬಂದೆ. ಆದರೆ ಈಗಾ ನನ್ನ ಬಳಿ ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅವರನ್ನು ಕೈ ಬಿಟ್ಟರು ಕಾರ್ಯಕರ್ತರು ಸ್ವಾಭಿಮಾನ ಬಿಡಲಿಲ್ಲ. ಹೀಗಾಗಿ ಅವರು ನನಗೆ ಬೆಂಬಲ ನೀಡಿದ್ದಾರೆ. ಇದರಿಂದಾಗಿ ನಾನು ಯಾವುದೇ ಕಾರಣಕ್ಕೂ ಅವರ ಕೈ ಬಿಡುವುದಿಲ್ಲ ಎಂದು ಹೇಳಿದ್ದಾರೆ.