ಕಾಮುಕರ ಅಟ್ಟಹಾಸ-ಫುಟ್‍ಪಾತ್ ನಲ್ಲಿ ಮಲಗಿದ್ದ ಭಿಕ್ಷುಕಿ ಮೇಲೆ ಅತ್ಯಾಚಾರ…

284
firstsuddi

ಮಂಡ್ಯ : ದುಷ್ಕರ್ಮಿಗಳು ಫುಟ್‍ಪಾತ್‍ನಲ್ಲಿ ಮಲಗಿದ್ದ ಭಿಕ್ಷುಕಿಯ ಮೇಲೆಯೇ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿರುವ ಅಮಾನವೀಯ ಘಟನೆ ನಗರದ ಬಾಟಾ ಶೋ ರೂಂ ಬಳಿ ನಡೆದಿದೆ. ಮೃತ ಭಿಕ್ಷುಕಿ ಫುಟ್‍ಪಾತ್ ನಲ್ಲೇ ಭಿಕ್ಷೆ ಬೇಡಿ, ಅಲ್ಲಿಯೇ ಮಲಗುತ್ತಿದ್ದರು. ಎಂದಿನಂತೆ ನಿನ್ನೆಯೂ ಕೂಡಾ ಫುಟ್‍ಪಾತ್‍ನಲ್ಲಿ ಮಲಗಿದ್ದ ಭಿಕ್ಷುಕಿಯನ್ನು ಗಮನಿಸಿದ ಕಾಮುಕರು ಭಿಕ್ಷುಕಿ ಮೇಲೆ ಅತ್ಯಾಚಾರ ಎಸಗಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಎಸ್ಪಿ ಪರಶುರಾಮ್, ಎಎಸ್ಪಿ, ಡಿವೈಎಸ್ಪಿ ಅವರು ಪರಿಶೀಲನೆ ನಡೆಸಿದ್ದು, ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.