ಕಾಳಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರುತ್ತಿದ್ದ ಆರೋಪಿ ಸಿಸಿಬಿ ವಶಕ್ಕೆ…

143
firstsuddi

ಬೆಂಗಳೂರು : ನಗರದ ಸಿಸಿಬಿ ಪೊಲೀಸರು ಗ್ಯಾಸ್ ಏಜೆನ್ಸಿ ಮೇಲೆ ದಾಳಿ ನಡೆಸಿ, ಕಾಳಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರುತ್ತಿದ್ದ ಓರ್ವ ಆರೋಪಿಯಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ರವಿಕುಮಾರ್(36) ಎಂದು ಗುರುತಿಸಲಾಗಿದ್ದು, ಈತ ಪೀಣ್ಯ ಇಂಡಸ್ಟ್ರೀಯಲ್ ಏರಿಯಾದಲ್ಲಿನ ಸೀಗಾ ಗ್ಯಾಸ್ ಏಜೆನ್ಸಿಯ ಸೂಪರ್ ವೈಸರ್ ಆಗಿದ್ದ.

300 ರೂ. ಬೆಲೆಯ ಸಿಲಿಂಡರ್ ಅನ್ನು ಆರೋಪಿ ರವಿಕುಮಾರ್ 3 ಸಾವಿರ ರೂಪಾಯಿಯಂತೆ 47 ಲೀಟರ್ ಸಿಲಿಂಡರ್ ಗ್ಯಾಸ್ ಮಾರಾಟ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಆರೋಪಿ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.