ಕಾಶಿ ವಿಶ್ವನಾಥ ಧಾಮದ ಕಾರ್ಮಿಕರಿಗೆ ಪಾದರಕ್ಷೆ ಕಳುಹಿಸಿದ ಮೋದಿ.

70
firstsuddi

ನವದೆಹಲಿ : ಕಾಶಿ ವಿಶ್ವನಾಥ ಧಾಮದಲ್ಲಿ ಕೆಲಸ ಮಾಡುವ ಕಾರ್ಮಿಕರು ಬರಿಗಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ತಿಳಿದ ಪ್ರಧಾನಿ ನರೇಂದ್ರ ಮೋದಿ ಅವರು 100 ಜೊತೆ ಸೆಣಬಿನ ಪಾದರಕ್ಷೆಗಳನ್ನು ಕಳುಹಿಸಿದ್ದಾರೆ.

ದೇವಾಲಯದ ಆವರಣದಲ್ಲಿ ಚರ್ಮ ಅಥವಾ ರಬ್ಬರ್ ಪಾದರಕ್ಷೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಈ ಕ್ರಮವನ್ನು ದೇವಸ್ಥಾನದ ಅರ್ಚಕರು, ಭದ್ರತಾ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು ಹಾಗೆಯೇ ಭಕ್ತರು ಸಹ ಪಾಲಿಸುತ್ತಾರೆ.ಹೀಗಾಗಿ ಪ್ರಧಾನಿ ಸೆಣಬಿನಿಂದ ತಯಾರಿಸಿದ ಪಾದರಕ್ಷೆಗಳನ್ನು ಖರೀದಿಸಿ ಧಾಮಕ್ಕೆ ರವಾನಿಸಿದ್ದಾರೆ.

ಇತ್ತೀಚೆಗೆ ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಉದ್ಘಾಟನೆ ಮಾಡಲು ಹೋಗಿದ್ದ ಮೋದಿ ಅದರ ನಿರ್ಮಾಣ ಮಾಡಿದ್ದ ಕಾರ್ಮಿಕರೊಟ್ಟಿಗೆ ಕುಳಿತು ಊಟ ಮಾಡಿದ್ದರು.